HomeKarnatakaBIG NEWS : 'ನೈತಿಕ ಪೊಲೀಸ್ ಗಿರಿ' ನಡೆಸಿದ್ರೆ ಮುಲಾಜಿಲ್ಲದೇ ಕ್ರಮ : DG &...

BIG NEWS : ‘ನೈತಿಕ ಪೊಲೀಸ್ ಗಿರಿ’ ನಡೆಸಿದ್ರೆ ಮುಲಾಜಿಲ್ಲದೇ ಕ್ರಮ : DG & IGP ಅಲೋಕ್ ಮೋಹನ್ ಎಚ್ಚರಿಕೆ

ಬೆಂಗಳೂರು : ನೈತಿಕ ಪೊಲೀಸ್ ಗಿರಿ ನಡೆಸಿದ್ರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಜಿ-ಐಜಿಪಿ ಅಲೋಕ್ ಮೋಹನ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು ರಾಜ್ಯದಲ್ಲಿ ಇತ್ತೀಚೆಗೆ ನೈತಿಕ ಪೊಲೀಸ್ ಗಿರಿ ನಡೆಯತ್ತಿರುವ ಪ್ರಕರಣಗಳು ಹೆಚ್ಚುತ್ತಿದೆ. ಹಾವೇರಿ ಹಾನಗಲ್ ನಲ್ಲಿ ಕೂಡ ಹಿಂದೂ-ಮುಸ್ಲಿಂ ಜೋಡಿ ಮೇಲೆ ಹಲ್ಲೆ ನಡೆಸಲಾಗಿದೆ. ಯಾರೇ ನೈತಿಕ ಪೊಲೀಸ್ ಗಿರಿ ನಡೆಸಿದ್ರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳುತ್ತೇವೆ, ಎಲ್ಲೇ ಇಂತಹ ಘಟನೆಗಳು ನಡೆದರೂ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಎಲ್ಲರಿಗೂ ಒಂದೇ ಎಂದು ಡಿಜಿ-ಐಜಿಪಿ ಅಲೋಕ್ ಮೋಹನ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ನೈತಿಕ ಪೊಲೀಸ್ ‍ಗಿರಿ ಪ್ರಕರಣಗಳು ಹೆಚ್ಚುತ್ತಿದ್ದು, ಹಾನಗಲ್ ನಲ್ಲಿ ಹಿಂದೂ ವ್ಯಕ್ತಿ ಜೊತೆ ಮುಸ್ಲಿಂ ಮಹಿಳೆ ಇದ್ದಿದ್ದನ್ನು ಕಂಡು ಯುವಕರ ಗುಂಪೊಂದು ಹಲ್ಲೆ ನಡೆಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular