ಬೆಂಗಳೂರು : ಅಲೆಮಾರಿ ಸಮುದಾಯಕ್ಕೆ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು, ಸರ್ಕಾರ 2 ಲಕ್ಷ ಸಾಲ ಸೌಲಭ್ಯ ನೀಡಲಿದೆ.
ಈ ಬಗ್ಗೆ ಮಾಹಿತಿ ನೀಡಿದ ಸಚಿವ ಮಹಾದೇವಪ್ಪ ‘ಆಧುನಿಕ ಸಂದರ್ಭವು ಬೆಳೆದಂತೆ, ತಮ್ಮ ಬದುಕಲ್ಲಿ ನಿರೀಕ್ಷಿತ ಸುಧಾರಣೆ ಕಾಣದ ಅಲೆಮಾರಿ ಸಮುದಾಯಗಳು ಒಂದಿಲ್ಲೊಂದು ಕಾರಣಕ್ಕೆ ಅಭದ್ರತೆ ಮತ್ತು ಅನಿಶ್ಚಿತತೆಯನ್ನು ಎದುರಿಸುತ್ತವೆ ಅವರಿಗೆ ಘನತೆಯ ಬದುಕನ್ನು ಕಲ್ಪಿಸುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಅಲೆಮಾರಿಗಳಿಗೆ 2 ಲಕ್ಷದವರೆಗೆ ಉದ್ಯಮಶೀಲತಾ ಸಾಲವನ್ನು ನಮ್ಮ ಸರ್ಕಾರ ಕಲ್ಪಿಸಲಿದೆ’ ಎಂದು ಮಾಹಿತಿ ನೀಡಿದ್ದಾರೆ.
ಆಧುನಿಕ ಸಂದರ್ಭವು ಬೆಳೆದಂತೆ, ತಮ್ಮ ಬದುಕಲ್ಲಿ ನಿರೀಕ್ಷಿತ ಸುಧಾರಣೆ ಕಾಣದ ಅಲೆಮಾರಿ ಸಮುದಾಯಗಳು ಒಂದಿಲ್ಲೊಂದು ಕಾರಣಕ್ಕೆ ಅಭದ್ರತೆ ಮತ್ತು ಅನಿಶ್ಚಿತತೆಯನ್ನು ಎದುರಿಸುತ್ತವೆ
ಅವರಿಗೆ ಘನತೆಯ ಬದುಕನ್ನು ಕಲ್ಪಿಸುವ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ ಸಮುದಾಯದ ಅಲೆಮಾರಿಗಳಿಗೆ 2 ಲಕ್ಷದವರೆಗೆ ಉದ್ಯಮಶೀಲತಾ ಸಾಲವನ್ನು ನಮ್ಮ ಸರ್ಕಾರ ಕಲ್ಪಿಸಲಿದೆ pic.twitter.com/gPCfkkrnPO
— Dr H C Mahadevappa(Buddha Basava Ambedkar Parivar) (@CMahadevappa) January 4, 2024

