HomeKarnataka'ಪ್ರಧಾನಿ ಮೋದಿಗೆ ವಿದೇಶಗಳ ಮೇಲಿರುವಷ್ಟು ಪ್ರೀತಿ, ಕರ್ನಾಟಕದ ಮೇಲಿಲ್ಲ' : ಸಚಿವ ಪ್ರಿಯಾಂಕ್ ಖರ್ಗೆ

‘ಪ್ರಧಾನಿ ಮೋದಿಗೆ ವಿದೇಶಗಳ ಮೇಲಿರುವಷ್ಟು ಪ್ರೀತಿ, ಕರ್ನಾಟಕದ ಮೇಲಿಲ್ಲ’ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ಪ್ರಧಾನಿ ಮೋದಿಗೆ ವಿದೇಶಗಳ ಮೇಲಿರುವಷ್ಟು ಪ್ರೀತಿ ಕರ್ನಾಟಕದ ಮೇಲಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ಧಾಳಿ ನಡೆಸಿದ್ದಾರೆ.

ರಾಜ್ಯದ ರೈತರು ಬರದಿಂದ ಕಂಗಾಲಾಗಿದ್ದಾರೆ, ಇಂತಹ ಪ್ರಾಕೃತಿಕ ಸವಾಲುಗಳು ಎದುರಾದಾಗಲೆಲ್ಲ ಕೇಂದ್ರ ಸರ್ಕಾರ ಕನ್ನಡಿಗರನ್ನು ಸದಾ ಸವತಿ ಮಕ್ಕಳಂತೆ ಕಂಡಿದೆ.ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಹಲವು ಪತ್ರಗಳನ್ನು ಬರೆದರು ಕೇಂದ್ರದ ಸ್ಪಂದನೆ ಇಲ್ಲ, ಖುದ್ದು ಭೇಟಿಯಾಗಿ ಬರ ಪರಿಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಟ್ಟರೂ ಪರಿಹಾರ ಇಲ್ಲ ಎಂದಿದ್ದಾರೆ.

ಕರ್ನಾಟಕ ಅಫ್ಘಾನಿಸ್ತಾನ, ಬಾಂಗ್ಲಾದೇಶಗಳಲ್ಲಿದ್ದಿದ್ದರೆ ಪ್ರಧಾನಿಗಳ ಮನ ಮಿಡಿಯುತ್ತಿತ್ತೋ ಏನೋ! ಏಕೆಂದರೆ ಅವರಿಗೆ ವಿದೇಶಗಳ ಮೇಲಿರುವಷ್ಟು ಪ್ರೀತಿ ಕರ್ನಾಟಕದ ಮೇಲಿಲ್ಲ!ರಾಜ್ಯದಲ್ಲಿ 25+1 ಬಿಜೆಪಿ ಸಂಸದರಿದ್ದಾರೆ, ಅವರಿಗೆ ಕನ್ನಡಿಗರ ಸ್ಥಿತಿಗತಿಯ ಬಗ್ಗೆ, ತಮ್ಮ ಹೊಣೆಗಾರಿಕೆಯ ಬಗ್ಗೆ ಕಿಂಚಿತ್ತೂ ಪ್ರಜ್ಞೆ ಇಲ್ಲ. ಸಂಸದ ಸ್ಥಾನವನ್ನು ಕೇವಲ “ಮೋದಿ ಭಜನಾ ಮಂಡಳಿಯ ಸದಸ್ಯತ್ವ” ಎಂದು ಪರಿಭಾವಿಸಿರುವಂತಿದೆ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಂಟಿದ ರಕ್ತದ ಕಲೆಗಳನ್ನು ತೋರಿಸಿ ಮತ ಕೇಳುತ್ತದೆಯೇ ಬಿಜೆಪಿ?

ಬಿಜೆಪಿ ಸಂಸದರಿಗೆ ಸಿದ್ದರಾಮಯ್ಯ ಏನ್ ಮಾಡ್ತಿದಾರೆ, ಡಿಕೆ ಶಿವಕುಮಾರ್ ಏನ್ ಮಾತಾಡ್ತಾರೆ ಎಂಬುದರ ಬಗ್ಗೆ ಇರುವ ಅರ್ಧದಷ್ಟು ಆಸಕ್ತಿ ಜನರ ಬಗ್ಗೆ ಇದ್ದಿದ್ದರೆ ಕನ್ನಡಿಗರಿಂದ ಪಡೆದ ಮತಕ್ಕೆ ಸ್ವಲ್ಪವಾದರೂ ನ್ಯಾಯ ಸಲ್ಲಿಸಿದಂತಾಗುತ್ತಿತ್ತು.ಬರ ಪರಿಹಾರಕ್ಕಾಗಿ ಅಥವಾ ಇನ್ಯಾವುದೇ ರಾಜ್ಯದ ಸಮಸ್ಯೆಗಳ ಬಗ್ಗೆ ಒಮ್ಮೆಯೂ ಬಿಜೆಪಿ ಕರ್ನಾಟಕ ಸಂಸದರು, ನಿಯೋಗ ಮಾಡಿಕೊಂಡು ಹೋಗಿ ಕೇಂದ್ರ ಸರ್ಕಾರವನ್ನು ಗಮನ ಸೆಳೆದಿರುವ ಉದಾಹರಣೆ ಇಲ್ಲ.ಕನ್ನಡಿಗರ ಬೆನ್ನಿಗೆ ಇರಿದ ಚೂರಿಯಲ್ಲಿ ಅಂಟಿದ ರಕ್ತದ ಕಲೆಗಳನ್ನು ತೋರಿಸಿ ಮತ ಕೇಳುತ್ತದೆಯೇ ಬಿಜೆಪಿ? ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ಧಾಳಿ ನಡೆಸಿದ್ದಾರೆ.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular