![](https://kannadadunia.com/wp-content/uploads/2023/12/indira-canteen.png)
ಬೆಂಗಳೂರು: ಬಡವರ ಹಸಿವು ನೀಗಿಸುವ ನಿಟ್ಟಿನಲ್ಲಿ ಆರಂಭವಾಗಿರುವ ಇಂದಿರಾ ಕ್ಯಾಂಟೀನ್ ಗಳು ಇದೀಗ ಮತ್ತಷ್ಟು ಶುಚಿ-ರುಚಿಯಾಗಿ ಹೊಸ ಬಗೆಯ ಖ್ಯಾದ್ಯಗಳ ಸೇವೆಗೂ ಲಭ್ಯವಾಗಿದೆ ಎಂಬುದು ವಿಶೇಷ.
ಕಡಿಮೆ ದರದಲ್ಲಿ ಗುಣಮಟ್ಟದ ರುಚಿಯಾದ ಊಟ-ತಿಂಡಿ ಇನ್ಮುಂದೆ ಇಂದಿರಾ ಕ್ಯಾಂಟೀನ್ ಗಳಲ್ಲಿ ಸಿಗಲಿವೆ. ಕೇವಲ 5 ರೂಪಾಯಿಗೆ ಬೆಳಗಿನ ಉಪಹಾರ ಹಾಗೂ ಕೇವಲ 10 ರೂಪಾಯಿಗೆ ಮಧ್ಯಾಹ್ನದ ಊಟ-ರಾತ್ರಿ ಊಟ ಗ್ರಾಹಕರಿಗೆ ಲಭ್ಯವಾಗಲಿದೆ. ಈಗಾಗಲೇ ಆಹಾರದ ಮೆನು ಕೂಡ ಸಿದ್ಧವಾಗಿದೆ. ಈ ಬಗ್ಗೆ ಮಾಹಿತಿ ಇಲ್ಲಿದೆ.
ಉಪಹಾರ ಬೆಳಿಗ್ಗೆ 7ರಿಂದ 10 ಗಂಟೆವರೆಗೆ: ಇಡ್ಲಿ-ಸಾಂಬಾರ್, ವೆಜ್ ಪುಲಾವ್-ರಾಯಿತಾ, ಖಾರಾಬಾತ್-ಚಟ್ನಿ, ಚೌಚೌಬಾತ್-ಚಟ್ನಿ, ಮಂಗಳೂರು ಬನ್ಸ್, ಇಡ್ಲಿ-ಚಟ್ನಿ, ಬಿಸಿಬೇಳೆಬಾತ್-ಬೂಂದಿ, ಪೊಂಗಲ್-ಚಟ್ನಿ, ಬ್ರೆಡ್-ಜಾಮ್, ಬನ್ಸ್ ಕೇವಲ 5 ರೂಪಾಯಿಗೆ ಸಿಗಲಿದೆ.
ಮದ್ಯಾಹ್ನದ ಊಟ 1 ಗಂಟೆಯಿಂದ 3 ಗಂಟೆವರೆಗೆ: ಅನ್ನ-ತರಕಾರಿ ಸಾಂಬಾರು, ಖೀರು, ಅನ್ನ-ಸಾಂಬಾರ್, ರಾಯಿತಾ, ಅನ್ನ-ತರಕಾರಿ ಸಾಂಬಾರು, ಮೊಸರನ್ನ, ರಾಗಿ ಮುದ್ದೆ, ಸೊಪ್ಪಿನ ಸಾರು, ಖೀರು, ಚಪಾತಿ-ಸಾಗು, ಖೀರು
ರಾತ್ರಿ ಊಟ ಸಂಜೆ 7:30ರಿಂದ ರಾತ್ರಿ9 ಗಂಟೆಯವರೆಗೆ: ಅನ್ನ -ತರಕಾರಿ ಸಾಂಬಾರು, ಅನ್ನ ತರಕಾರಿ ಸಾಂಬಾರು, ರಾಯಿತಾ, ರಾಗಿ ಮುದ್ದೆ-ಸೊಪ್ಪಿನ ಸಾರು, ಚಪಾತಿ-ವೆಜ್ ಗ್ರೇವಿ ಸಿಗಲಿದೆ.
ಇಂದಿರಾ ಕ್ಯಾಂಟೀನ್ ನಲ್ಲಿ ರುಚಿ ರುಚಿಯಾದ ಬಾಯಲ್ಲಿ ನೀರೂರಿಸುವಂತಹ ಉಪಹಾರ, ಊಟ ಸಿಗಲಿದ್ದು, ಹಸಿದ ಹೊಟ್ಟೆಗೆ ನಿಜಕ್ಕೂ ಅಕ್ಷಯಪಾತ್ರೆಯಂತಿದೆ.
ಇನ್ನು ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬಡಜನರ ಹಸಿವು ನೀಗಿಸುವ ಉದ್ದೇಶದೊಂದಿಗೆ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಜಾರಿಗೆ ತಂದಿರುವ ಇಂದಿರಾ ಕ್ಯಾಂಟೀನ್ ಗಳು ಈಗ ಮತ್ತಷ್ಟು ಶುಚಿ, ರುಚಿಯಾಗಿ ಹೊಸ ಬಗೆಯ ಆಹಾರದೊಂದಿಗೆ ಗ್ರಾಹಕರ ಸೇವೆಗೆ ಸಿದ್ಧಗೊಂಡಿದೆ. ರಿಯಾಯಿತಿ ದರದಲ್ಲಿ ಸಾದಿಷ್ಟ ತಿಂಡಿ-ಊಟ ದೊರೆಯುವ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಜನರಿಗೆ ಕರೆ ನೀಡಿದ್ದಾರೆ.