HomeKarnatakaರಾಜ್ಯದ 1.30 ಕೋಟಿ ಕುಟುಂಬಗಳಿಗೆ ಪ್ರತೀ ವರ್ಷ 50- 60 ಸಾವಿರ ರೂ. ನೇರವಾಗಿ ತಲುಪುವ...

ರಾಜ್ಯದ 1.30 ಕೋಟಿ ಕುಟುಂಬಗಳಿಗೆ ಪ್ರತೀ ವರ್ಷ 50- 60 ಸಾವಿರ ರೂ. ನೇರವಾಗಿ ತಲುಪುವ ವ್ಯವಸ್ಥೆ : ಸಿಎಂ ಸಿದ್ದರಾಮಯ್ಯ

ಧಾರವಾಡ : ಒಂದು ಕೋಟಿ ಮೂವತ್ತು ಲಕ್ಷ ಕುಟುಂಬಗಳಿಗೆ ಪ್ರತೀ ವರ್ಷ 50 ರಿಂದ 60 ಸಾವಿರ ರೂಪಾಯಿ ನೇರವಾಗಿ ತಲುಪುವ ವ್ಯವಸ್ಥೆಯನ್ನು ನಮ್ಮ ಸರ್ಕಾರ ಮಾಡಿದೆ. ಇದರಿಂದ ನಾಡಿನ 4 ಕೋಟಿ ರೈತರು, ಕಾರ್ಮಿಕರು, ಬಡವರಿಗೆ ಅನುಕೂಲ ಆಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಅವರು ಧಾರವಾಡದ ಕರ್ನಾಟಕ ಕಾಲೇಜು ಮೈದಾನದಲ್ಲಿ ಕಾರ್ಮಿಕ ಇಲಾಖೆ ಆಯೋಜಿಸಿದ್ದ ಬೃಹತ್ ಕಾರ್ಯಕ್ರಮದಲ್ಲಿ ಜಿಲ್ಲೆಯ 525 ವಿಶೇಷ ಚೇತನ ಮಕ್ಕಳಿಗೆ ತ್ರಿಚಕ್ರ ವಾಹನ ಹಾಗೂ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಿ, ಗಿಗ್ ಕಾರ್ಮಿಕರ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೈತರು ಮತ್ತು ಕಾರ್ಮಿಕರು ದೇಶವನ್ನು ನಿರ್ಮಿಸುತ್ತಾರೆ. ದೇಶದಲ್ಲಿ ಉತ್ಪಾದನೆ ಮಾಡುತ್ತಾರೆ, ಸಂಪತ್ತು ಸೃಷ್ಟಿಸುತ್ತಾರೆ.ಬೆವರಿನ ಸಂಸ್ಕೃತಿಯ ಶ್ರಮಿಕರು ದೇಶದ ಸಂಪತ್ತನ್ನು ಸೃಷ್ಟಿಸುತ್ತಾರೆ. ಬಡವರ ಶ್ರಮದಿಂದ ಸೃಷ್ಟಿಯಾಗಿರುವ ದೇಶದ ಸಂಪತ್ತಿನಲ್ಲಿ ಶೇ.90 ರಷ್ಟು ಕೇವಲ 10 ಜನರ ಕೈಯಲ್ಲಿದೆ. ಇದು ತಪ್ಪು. ಶ್ರಮಿಕರ ದುಡಿಮೆಯ ಸಂಪತ್ತು ಎಲ್ಲರಲ್ಲೂ ಸಮಾನವಾಗಿ ಹಂಚಿಕೆಯಾಗಬೇಕು ಎನ್ನುವ ದೃಷ್ಟಿಯಿಂದ ನಮ್ಮ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular