HomeKarnatakaಹುಚ್ಚುನಾಯಿ ದಾಳಿ; 10 ಜನರಿಗೆ ಗಂಭೀರ ಗಾಯ

ಹುಚ್ಚುನಾಯಿ ದಾಳಿ; 10 ಜನರಿಗೆ ಗಂಭೀರ ಗಾಯ

ಕೊಪ್ಪಳ: ಹುಚ್ಚುನಾಯಿಯೊಂದು ದಾಳಿ ನಡೆಸಿ ಹತ್ತು ಜನರನ್ನು ಕಚ್ಚಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಗಜೇಂದ್ರಗಡ ರಸ್ತೆಯ ಮುದ್ದಾನೇಶ್ವರ ಮಠದಲ್ಲಿ ನಡೆದಿದೆ.

ಹುಚ್ಚುನಾಯಿ ದಾಳಿಗೆ ಬಾಲಕ ಸೇರಿ 10 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಬಳಿಕ ಸಾರ್ವಜನಿಕರು ನಾಯಿಯನ್ನು ಹಿಡಿದು ಕೊಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಾಯಾಳುಗಳನ್ನು ಕುಷ್ಟಗಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕ, ಮಹಿಳೆ ಸೇರಿದಂತೆ ಹತ್ತು ಜನರಿಗೆ ನಾಯಿ ಕಚ್ಚಿದ್ದು, ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗೌಡರುಣಿ, ಇಂದಿರಾ ನಗರ, ಭೋವಿ ಓಣಿ, ಚಲುವಾದಿ ಓಣಿ ಸೇರಿದಂತೆ ಹಲವೆಡೆಗಳಲ್ಲಿ ಬೀದಿನಾಯಿಗಳ ಹಾವಳಿ ಕೂಡ ಹೆಚ್ಚಿದ್ದು, ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular