HomeKarnatakaBIG NEWS: ಕಾಂಗ್ರೆಸ್ ಶಾಸಕಾಂಗ ಸಭೆಗೆ ಹೋಗಿದ್ದು ನಿಜ ಎಂದ ಹೆಚ್.ವಿಶ್ವನಾಥ್

BIG NEWS: ಕಾಂಗ್ರೆಸ್ ಶಾಸಕಾಂಗ ಸಭೆಗೆ ಹೋಗಿದ್ದು ನಿಜ ಎಂದ ಹೆಚ್.ವಿಶ್ವನಾಥ್

ಬೆಳಗಾವಿ: ಬೆಳಗಾವಿಯಲ್ಲಿ ನಿನ್ನೆ ನಡೆದಿದ್ದ ಕಾಂಗ್ರೆಸ್ ಶಾಸಕಾಂಗ ಸಭೆಗೆ ನಾನು ಹೋಗಿದ್ದು ನಿಜ ಎಂದು ಬಿಜೆಪಿ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಆಯೋಜಿಸಿದ್ದ ಔತಣಕೂಟ, ಸಿಎಲ್ ಪಿ ಸಭೆಯಲ್ಲಿ ಬಿಜೆಪಿ ಶಾಸಕರು ಭಾಗವಹಿಸಿದ್ದರು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ನಾನು ಕಾಂಗ್ರೆಸ್ ಶಾಸಕಾಂಗ ಸಭೆಗೆ ಹೋಗಿದ್ದು ನಿಜ. ಡಿ.ಕೆ.ಶಿವಕುಮಾರ್ ಔತಣಕೂಟಕ್ಕೆ ಆಹ್ವಾನ ನೀಡಿದ್ದರು. ಆಹ್ವಾನ ಇದ್ದಿದ್ದು ಭೋಜನಕೂಟಕ್ಕೆ ಆದರೆ ಗೊತ್ತಾಗದೇ ಸಭೆಗೆ ಹೋಗಿದ್ದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಔತಣಕೂಟ ಎಲ್ಲಿ ನಡೆಯುತ್ತಿದೆ ಅಂತಾ ನನಗೆ ಗೊತ್ತಿರಲಿಲ್ಲ. ನೇರವಾಗಿ ಸಿಎಲ್ ಪಿ ಸಭೆಯ ಹಾಲ್ ಗೆ ಹೊರಟು ಹೋದೆ. ಹಾಲ್ ಗೆ ಹೋಗುತ್ತಿದ್ದಂತೆ ಸಿಎಂ, ಡಿಸಿಎಂ ಬನ್ನಿ ಎಂದು ಕರೆದರು. ಅರ್ಧಗಂಟೆ ಸಭೆಯಲ್ಲಿದ್ದು ಬಳಿಕ ಭೋಜನ ಕೂಟಕ್ಕೆ ಹೊರಟು ಹೋದೆ ಎಂದು ಹೇಳಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular