HomeIndiaBIGG UPDATE : ಲೋಕಸಭೆಯಿಂದ ಇದುವರೆಗೆ 14 'ವಿಪಕ್ಷ ಸಂಸದರು' ಅಮಾನತು |14 MP's suspended

BIGG UPDATE : ಲೋಕಸಭೆಯಿಂದ ಇದುವರೆಗೆ 14 ‘ವಿಪಕ್ಷ ಸಂಸದರು’ ಅಮಾನತು |14 MP’s suspended

ನವದೆಹಲಿ :  ಲೋಕಸಭೆಯಲ್ಲಿ ಭಾರೀ ಗದ್ದಲ, ಕೋಲಾಹಲ ಮಾಡಿದ ಹಿನ್ನೆಲೆ ಇದೀಗ ಮತ್ತೆ 9 ಮಂದಿ ಸಂಸದರು ಅಮಾನತಾಗಿದ್ದು,ಇದುವರೆಗೆ 14 ಸಂಸದರು ಅಮಾನತಾಗಿದ್ದಾರೆ.

ಐವರು ಕಾಂಗ್ರೆಸ್ ಸಂಸದರನ್ನು ಅಮಾನತುಗೊಳಿಸಿದ ನಂತರ, ಸಂಸತ್ತಿನ ಕೆಳಮನೆ ಒಂಬತ್ತು ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದೆ. ಅಮಾನತುಗೊಂಡ ಸಂಸದರಲ್ಲಿ ಬೆನ್ನಿ ಬೆಹನನ್, ವಿ.ಕೆ.ಶ್ರೀಕಂಠನ್, ಮೊಹಮ್ಮದ್ ಜಾವೇದ್, ಪಿ.ಆರ್.ನಟರಾಜನ್, ಕನಿಮೋಳಿ ಕರುಣಾನಿಧಿ, ಕೆ.ಸುಬ್ರಮಣ್ಯಂ, ಎಸ್.ಆರ್.ಪಾರ್ಥಿಬನ್, ಎಸ್.ವೆಂಕಟೇಶನ್ ಮತ್ತು ಮಾಣಿಕಂ ಠಾಗೋರ್, ಕಾಂಗ್ರೆಸ್ ಸಂಸದರಾದ ಟಿ.ಎನ್.ಪ್ರತಾಪನ್, ಡೀನ್ ಕುರಿಯಕೋಸ್, ಎಸ್.ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಹಿಬಿ ಈಡನ್ ಸೇರಿದ್ದಾರೆ. ಇದುವರೆಗೆ 14 ಸಂಸದರು ಅಮಾನತಾಗಿದ್ದಾರೆ.

ಭದ್ರತಾ ಉಲ್ಲಂಘನೆ ವಿವಾದದ ಮಧ್ಯೆ ‘ಅನ್ರುಲಿ ನಡವಳಿಕೆ’ಗಾಗಿ ಚಳಿಗಾಲದ ಅಧಿವೇಶನ ಮುಗಿಯುವವರೆಗೂ 14 ಲೋಕಸಭಾ ಸಂಸದರನ್ನು ಅಮಾನತು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular