HomeKarnatakaರಾಜ್ಯ ಸರ್ಕಾರದಿಂದ ʻಸುಳ್ಳು ಸುದ್ದಿʼ ತಡೆಗೆ ಮಹತ್ವದ ಕ್ರಮ : ʻIDTUʼ ಕಾರ್ಯ ನಿರ್ವಾಹಣೆಗೆ 5...

ರಾಜ್ಯ ಸರ್ಕಾರದಿಂದ ʻಸುಳ್ಳು ಸುದ್ದಿʼ ತಡೆಗೆ ಮಹತ್ವದ ಕ್ರಮ : ʻIDTUʼ ಕಾರ್ಯ ನಿರ್ವಾಹಣೆಗೆ 5 ಸಂಸ್ಥೆಗಳ ಆಯ್ಕೆ

ಬೆಂಗಳೂರು : ರಾಜ್ಯ ಸರ್ಕಾರವು ಸುಳ್ಳು ಸುದ್ದಿ ತಡೆಗೆ ಮಹತ್ವದ ಕ್ರಮ ಕೈಗೊಂಡಿದ್ದು, ಮಾಹಿತಿ ತಿರುಚುವಿಕೆ ಪತ್ತೆ ಘಟಕದ (IDTU) ಕಾರ್ಯ ನಿರ್ವಹಣೆಗೆ ಐದು ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.

ರಾಜ್ಯ ಸರ್ಕಾರವು ಇನ್ಫೋ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌, ಗೌರಿ ಮೀಡಿಯಾ ಟ್ರಸ್ಟ್‌, ಟೈಲೈಕ್‌ ಟೆಕ್ನಾಲಜಿ ಲಿಮಿಟೆಡ್‌, ನ್ಯೂಸ್‌ ಪ್ಲಸ್‌ ಕಮ್ಯುನಿಕೇಷನ್‌ ಮತ್ತು ಒಡಬ್ಲ್ಯೂ ಡಾಟಾ ಲೀಡ್ಸ್‌ ಸಂಸ್ಥೆಗಳನ್ನು ಸುಳ್ಳು ಸುದ್ದಿ ಪತ್ತೆಗೆ ಆಯ್ಕೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯ ಸರ್ಕಾರವು ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಅಧೀನದಲ್ಲಿ ಪೊಲೀಸ್‌ ಮಹಾನಿರ್ದೇಶಕರ ನೇತೃತ್ವದಲ್ಲಿ ಐಡಿಟಿಯು ಕಾರ್ಯನಿರ್ವಹಿಸಲಿದ್ದು, ಶೀಘ್ರವೇ ಕಾರ್ಯಾಚರಣೆ ಆರಂಭಿಸಲಿದೆ.

For Latest News Updates, Join Our Whatsapp Community🚩
RELATED ARTICLES

Most Popular