HomeKarnatakaದುಡಿಮೆಯ ನಂಬಿ ಬದುಕು......ಅದರಲಿ ದೇವರ ಹುಡುಕು; ಎಲ್ಲರನ್ನೂ ಬಡಿದೆಬ್ಬಿಸುವಂತಿದೆ ಪತಿ - ಪತ್ನಿ ದುಡಿಮೆಯ ಈ...

ದುಡಿಮೆಯ ನಂಬಿ ಬದುಕು……ಅದರಲಿ ದೇವರ ಹುಡುಕು; ಎಲ್ಲರನ್ನೂ ಬಡಿದೆಬ್ಬಿಸುವಂತಿದೆ ಪತಿ – ಪತ್ನಿ ದುಡಿಮೆಯ ಈ ದೃಶ್ಯ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಇದೊಂದು ವಿಡಿಯೋ ಎಂತಹ ಸೋಮಾರಿತವನ್ನೂ ಓಡಿಸುವಂತಿದೆ… ದುಡಿಮೆಗಾಗಿ ಪತಿ – ಪತ್ನಿ ಮೈಬಗ್ಗಿಸಿ ಕೆಲಸ ಮಾಡುತ್ತಿರುವ ದೃಶ್ಯವೊಂದು ಭಾರಿ ವೈರಲ್ ಆಗಿದೆ.

ಜೀವನೋಪಾಯಕ್ಕಾಗಿ ಪತಿ-ಪತ್ನಿ ಇಬ್ಬರೂ ರಸ್ತೆ ಬದಿಯಲ್ಲಿ ಕಬ್ಬಿಣ ಹದಮಾಡುವ ಕೆಲಸ ಮಾಡುತ್ತಿದ್ದು, ಮಹಿಳೆ ತನ್ನ ಕೈಲಿದ್ದ ಸುತ್ತಿಗೆಯಿಂದ ಬಲವಾಗಿ ಕಬ್ಬಿಣವನ್ನು ಬಡಿದು ಅದನ್ನು ಹದ ಮಾಡುವುದರಲ್ಲಿ ತಲ್ಲೀನಳಾಗಿದ್ದಾಳೆ. ಮಹಿಳೆಯ ಪತಿ ಕೂಡ ಕಬ್ಬಿಣ ಹದ ಮಾಡುವುದಲ್ಲಿ ನಿರತನಾಗಿದ್ದಾನೆ. ಪತಿ-ಪತ್ನಿಯ ದುಡಿಮೆಯ ಬದಕು ಕಂಡು ರಸ್ತೆಯಲ್ಲಿ ಹೋಗುತ್ತಿರುವವರು ಒಂದು ಕ್ಷಣ ಹುಬ್ಬೇರಿಸಿ ನಿಂತು ಮುಂದೆ ಸಾಗುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ಇದೊಂದು ದೃಶ್ಯ ಪ್ರತಿಯೊಬ್ಬರನ್ನು ಬಡಿದೆಬ್ಬಿಸುವಂತಿದೆ. ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ…ಮನಸ್ಸೊಂದಿದ್ದರೆ ಮಾರ್ಗವು ಉಂಟು….ಎಂಬ ಹಾಡು ನೆನಪಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular