HomeKarnatakaಶಿಕಾರಿಪುರ ತಾಲ್ಲೂಕಿನ ನೋಡಬಹುದಾದ ಪ್ರಮುಖ ಪ್ರವಾಸಿ ತಾಣಗಳಿವು

ಶಿಕಾರಿಪುರ ತಾಲ್ಲೂಕಿನ ನೋಡಬಹುದಾದ ಪ್ರಮುಖ ಪ್ರವಾಸಿ ತಾಣಗಳಿವು

ಶಿಕಾರಿಪುರ ತಾಲ್ಲೂಕು ಶಿವಶರಣರ ನಾಡು ಎಂದೇ ಹೆಸರುವಾಸಿ. ಕನ್ನಡದ ಪ್ರಥಮ ಸಾಮ್ರಾಜ್ಯವಾದ ಕದಂಬ ವಂಶದ ಸ್ಥಾಪಕ ಮಯೂರ ವರ್ಮನ ಹುಟ್ಟೂರು ತಾಳಗುಂದ ಶಿಕಾರಿಪುರ ತಾಲ್ಲೂಕಿನಲ್ಲಿದೆ.

ಶಿಕಾರಿಪುರದಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲಿರುವ ಈ ಸ್ಥಳ ಕ್ರಿ.ಶ. 12 ನೇ ಶತಮಾನದವರೆಗೆ ಪ್ರಖ್ಯಾತ ಸ್ಥಳವಾಗಿತ್ತು. ತಾಳಗುಂದವನ್ನು ಸ್ಥಾನಕುಂದೂರು, ಸ್ಥಾನಗುಂದೂರು ಹೆಸರಿನಿಂದ ಕರೆಯಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬನವಾಸಿ ಕದಂಬರ ರಾಜ ಕಾಕುಸ್ಥವರ್ಮನ ಕಾಲದಿಂದಲೂ ಪ್ರಮುಖ ಸ್ಥಳವಾಗಿದ್ದ ಇಲ್ಲಿ ಪ್ರಣವೇಶ್ವರ ದೇವಾಲಯವಿದೆ.

ತಾಳಗುಂದದಲ್ಲಿನ ಶಾಸನ ಕನ್ನಡದ ಹಳೆಯ ಶಾಸನವೆಂದು ಪ್ರಖ್ಯಾತಿಯನ್ನು ಪಡೆದಿದೆ. ಐತಿಹಾಸಿಕ ಸ್ಥಳವಾಗಿರುವ ತಾಳಗುಂದವನ್ನೊಮ್ಮೆ ನೋಡಬನ್ನಿ.

ಶಿಕಾರಿಪುರದ ಮತ್ತೊಂದು ಪ್ರಮುಖ ಸ್ಥಳ ಬಳ್ಳಿಗಾವಿ. ದಕ್ಷಿಣದ ಕೇದಾರ ಎಂದೇ ಪ್ರಸಿದ್ಧವಾಗಿರುವ ಇಲ್ಲಿ ಕೇದಾರೇಶ್ವರ ದೇವಾಲಯವಿದೆ. ಅಲ್ಲಮ ಪ್ರಭು ಜನಿಸಿದ ಸ್ಥಳ ಇದೆಂದು ಹೇಳಲಾಗಿದೆ.

12 ನೇ ಶತಮಾನದ ವಚನಕಾರ್ತಿ ಅಕ್ಕಮಹಾದೇವಿ ಜನಿಸಿದ ಸ್ಥಳ ಉಡುಗಣಿ ಶಿಕಾರಿಪುರ ತಾಲ್ಲೂಕಿನ ಮತ್ತೊಂದು ಪ್ರಮುಖ ಸ್ಥಳ.

ಶಿಕಾರಿಪುರ ತಾಲ್ಲೂಕಿನ ಅಂಜನಾಪುರ ಜಲಾಶಯ, ಸ್ವಾತಂತ್ರ್ಯ ಹೋರಾಟದ ಸ್ಥಳ ಈಸೂರು, ಶಿಕಾರಿಪುರದ ಹುಚ್ಚರಾಯ ಸ್ವಾಮಿ ದೇವಾಲಯ, ಪಾರ್ಕ್ ಸೇರಿದಂತೆ ಹತ್ತು ಹಲವು ಸ್ಥಳಗಳು ಶಿಕಾರಿಪುರ ತಾಲ್ಲೂಕಿನಲ್ಲಿವೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular