HomeEntertainment50 ಕೋಟಿ ಗಡಿಯತ್ತ 'ದಿ ವ್ವಾನ್': ಬುಧವಾರದ ಕುಸಿತದ ನಡುವೆಯೂ ಸಿದ್ಧಾರ್ಥ್ - ತಮನ್ನಾ ಪಡೆದ...

50 ಕೋಟಿ ಗಡಿಯತ್ತ ‘ದಿ ವ್ವಾನ್’: ಬುಧವಾರದ ಕುಸಿತದ ನಡುವೆಯೂ ಸಿದ್ಧಾರ್ಥ್ – ತಮನ್ನಾ ಪಡೆದ ಗಳಿಕೆ ಎಷ್ಟು?

ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ತಮನ್ನಾ ಭಾಟಿಯಾ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ‘ದ ವಾನ್ – ಫೋರ್ಸ್ ಆಫ್ ದಿ ಫಾರೆಸ್ಟ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ತನ್ನ ಪ್ರದರ್ಶನ ಮುಂದುವರಿಸಿದೆ. ಬುಧವಾರ ಸೆಪ್ಟೆಂಬರ್ 30 ರಂದು ಚಿತ್ರದ ಗಳಿಕೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದ್ದು, ಭಾರತದಲ್ಲಿ ಆರನೇ ದಿನ 4.35 ಕೋಟಿ ರೂಪಾಯಿ ನಿವ್ವಳ ಗಳಿಕೆ ಮಾಡಿದೆ. ಇದು ಮಂಗಳವಾರದ 6 ಕೋಟಿ ರೂಪಾಯಿ ಗಳಿಕೆಗೆ ಹೋಲಿಸಿದರೆ ಶೇಕಡಾ 27.5 ರಷ್ಟು ಕಡಿಮೆಯಾಗಿದೆ.

ಸ್ಯಾಕ್ನಿಲ್ಕ್ ಬಾಕ್ಸ್ ಆಫೀಸ್ ವರದಿಗಳ ಪ್ರಕಾರ, ‘ದ ವಾನ್’ ಸಿನಿಮಾ ಭಾರತದಲ್ಲಿ ಈವರೆಗೆ ಒಟ್ಟು 49.20 ಕೋಟಿ ರೂಪಾಯಿ ನಿವ್ವಳ ಗಳಿಕೆ ಸಂಗ್ರಹಿಸಿದೆ. ದೇಶಾದ್ಯಂತ ಇದರ ಒಟ್ಟು ಗ್ರೋಸ್ ಗಳಿಕೆ 58.54 ಕೋಟಿ ರೂಪಾಯಿಗೆ ತಲುಪಿದ್ದು, ವಿದೇಶಿ ಮಾರುಕಟ್ಟೆಯಿಂದ 5 ಕೋಟಿ ರೂಪಾಯಿ ಗಳಿಸಿದೆ. ಇದರೊಂದಿಗೆ ಚಿತ್ರದ ಜಾಗತಿಕ ಒಟ್ಟು ಗಳಿಕೆ 63.54 ಕೋಟಿ ರೂಪಾಯಿ ದಾಟಿದೆ.

ಶುಕ್ರವಾರ ಸೆಪ್ಟೆಂಬರ್ 25 ರಂದು 8 ಕೋಟಿ ರೂಪಾಯಿ ಗಳಿಕೆಯೊಂದಿಗೆ ಖಾತೆ ತೆರೆದ ಈ ಚಿತ್ರ, ವಾರಾಂತ್ಯದಲ್ಲಿ ಉತ್ತಮ ಚೇತರಿಕೆ ಕಂಡಿತ್ತು. ಶನಿವಾರ 11.25 ಕೋಟಿ ಹಾಗೂ ಭಾನುವಾರ 14.35 ಕೋಟಿ ರೂಪಾಯಿ ಗಳಿಸಿ ಗಮನ ಸೆಳೆದಿತ್ತು. ಆದರೆ ಸೋಮವಾರ ಗಳಿಕೆ 5.25 ಕೋಟಿ ರೂಪಾಯಿಗೆ ಕುಸಿದಿತ್ತು. ಮಂಗಳವಾರ 6 ಕೋಟಿ ರೂಪಾಯಿಯೊಂದಿಗೆ ಕೊಂಚ ಚೇತರಿಸಿಕೊಂಡಿದ್ದ ಗಳಿಕೆ ಬುಧವಾರ ಮತ್ತೆ 4.35 ಕೋಟಿ ರೂಪಾಯಿಗೆ ಇಳಿದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸುಮಾರು 80 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕ್ಕೆ ಮುಂಬರುವ ವಾರದ ದಿನಗಳು ಹಾಗೂ ಎರಡನೇ ವಾರಾಂತ್ಯದ ಗಳಿಕೆ ಅತ್ಯಂತ ನಿರ್ಣಾಯಕವಾಗಲಿದೆ. ಚಿತ್ರದ ಕಥೆ ಮತ್ತು ದೃಶ್ಯ ವೈಭವಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದರೂ, ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೀಪಕ್ ಕುಮಾರ್ ಮಿಶ್ರಾ ನಿರ್ದೇಶನದ ಈ ಚಿತ್ರದಲ್ಲಿ ಸುನಿಲ್ ಗ್ರೋವರ್, ಅನುಪ್ ಸೋನಿ ಮತ್ತು ಶ್ವೇತಾ ತಿವಾರಿ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular