HomeEntertainment'ಹನುಮಾನ್ ಅಂಶ್' ಕಮಾಲ್ ಬೆನ್ನಲ್ಲೇ ತೆರೆಗೆ ಬರಲಿದೆ 'ನೀಮ್ ಕರೋಲಿ ಬಾಬಾ' ಧಾರಾವಾಹಿ!

‘ಹನುಮಾನ್ ಅಂಶ್’ ಕಮಾಲ್ ಬೆನ್ನಲ್ಲೇ ತೆರೆಗೆ ಬರಲಿದೆ ‘ನೀಮ್ ಕರೋಲಿ ಬಾಬಾ’ ಧಾರಾವಾಹಿ!

ಬಾಕ್ಸ್ ಆಫೀಸ್‌ನಲ್ಲಿ ಭಾರೀ ಸದ್ದು ಮಾಡುತ್ತಿರುವ ‘ಹನುಮಾನ್ ಅಂಶ್’ ಸಿನಿಮಾದ ಅದ್ಭುತ ಯಶಸ್ಸಿನ ಬೆನ್ನಲ್ಲೇ, ಪ್ರಸಿದ್ಧ ಆಧ್ಯಾತ್ಮಿಕ ಗುರು ನೀಮ್ ಕರೋಲಿ ಬಾಬಾ ಅವರ ಜೀವನ ಆಧಾರಿತ ಹೊಸ ಕಿರುತೆರೆ ಧಾರಾವಾಹಿಯೊಂದು ಪ್ರಸಾರಕ್ಕೆ ಸಿದ್ಧವಾಗಿದೆ. ‘ನೀಮ್ ಕರೋರಿ ಬಾಬಾ’ ಹೆಸರಿನ ಈ ಹೊಸ ಧಾರಾವಾಹಿಯು ಸೋನಿ ಎಂಟರ್‌‌ಟೈನ್‌ಮೆಂಟ್ ಟೆಲಿವಿಷನ್‌ ನಾಲೆಯಲ್ಲಿ ಬಿತ್ತರಗೊಳ್ಳಲಿದ್ದು, ಸೋನಿ ಲಿವ್ OTT ವೇದಿಕೆಯಲ್ಲೂ ವೀಕ್ಷಣೆಗೆ ಲಭ್ಯವಿರಲಿದೆ.

ಸೆಪ್ಟೆಂಬರ್ 30 ರಂದು ವಾಹಿನಿಯು ಈ ಧಾರಾವಾಹಿಯ ಮೊದಲ ಪ್ರೋಮೋ ಬಿಡುಗಡೆ ಮಾಡಿದೆ. ಈ ಪ್ರೋಮೋದಲ್ಲಿ ಬಾಬಾರವರ ಪವಾಡಸದೃಶ್ಯ ಜೀವನ ಪಯಣ ಹಾಗೂ ಅವರ ಅಪಾರ ಪವಾಡಗಳ ಕಥೆಗಳನ್ನು ತಲುಪಿಸುವ ಸೂಚನೆ ನೀಡಲಾಗಿದೆ. ಆದರೆ ಪ್ರಸಾರದ ನಿಖರವಾದ ದಿನಾಂಕವನ್ನು ವಾಹಿನಿ ಇನ್ನು ಅಧಿಕೃತವಾಗಿ ಪ್ರಕಟಿಸಿಲ್ಲ.

ವಿಶಾಲ್ ಚತುರ್ವೇದಿ ನಿರ್ದೇಶನದ ‘ಹನುಮಾನ್ ಅಂಶ್’ ಚಿತ್ರವು ನೀಮ್ ಕರೋಲಿ ಬಾಬಾ ಅವರ ಜೀವನ ಆಧರಿಸಿದ್ದು, ಶೋಭಿನವ್ ಸತ್ಯಾ ಬಾಬಾರವರ ಪಾತ್ರದಲ್ಲಿ ಹಾಗೂ ಪೂರ್ಣಿಮಾ ತಿವಾರಿ ರಾಮ್ ಬೇಟಿ ಪಾತ್ರದಲ್ಲಿ ನಟಿಸಿದ್ದಾರೆ. ಚಂದನ್ ಕೆ ಆನಂದ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಆಗಸ್ಟ್ 7 ರಂದು ತೆರೆಕಂಡ ಈ ಚಿತ್ರವು ಆರಂಭದಲ್ಲಿ ಕೇವಲ 10 ಲಕ್ಷ ರೂಪಾಯಿ ಗಳಿಸಿ ನಿಧಾನಗತಿಯ ಶುರುವಾತು ಪಡೆದಿತ್ತು. ಆದರೆ ದಿನ ಕಳೆದಂತೆ ಪ್ರೇಕ್ಷಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿ, 2026ರ ಅತ್ಯಂತ ಅಚ್ಚರಿಯ ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರರಂಗದ ಬಾಕ್ಸ್ ಆಫೀಸ್ ವರದಿಗಳ ಪ್ರಕಾರ, ಸಿನಿಮಾ ಬಿಡುಗಡೆಯಾದ 55ನೇ ದಿನದಲ್ಲೂ 2.35 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದರೊಂದಿಗೆ ಭಾರತದಲ್ಲಿ ಒಟ್ಟು 314.63 ಕೋಟಿ ರೂಪಾಯಿ ಹಾಗೂ ಜಾಗತಿಕವಾಗಿ 410.75 ಕೋಟಿ ರೂಪಾಯಿ ಗಳಿಸಿ ಹೊಸ ದಾಖಲೆ ಬರೆದಿದೆ. OTT ಯಲ್ಲಿ ಬಿಡುಗಡೆಯಾಗುವ ಮುನ್ನ ಈ ಚಿತ್ರವನ್ನು ಅಂತರರಾಷ್ಟ್ರೀಯ ಮಟ್ಟದಲ್ಲೂ ಪ್ರದರ್ಶಿಸಲು ಚಿತ್ರತಂಡ ಯೋಜನೆ ರೂಪಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular