HomeKarnatakaBIG NEWS: ಗುತ್ತಿಗೆದಾರನ ಕಾರು ಅಡ್ಡಗಟ್ಟಿ ಕಾರಿನ ಸಮೇತ 50 ಲಕ್ಷ ದೋಚಿ ಪರಾರಿಯಾದ ದುಷ್ಕರ್ಮಿಗಳು

BIG NEWS: ಗುತ್ತಿಗೆದಾರನ ಕಾರು ಅಡ್ಡಗಟ್ಟಿ ಕಾರಿನ ಸಮೇತ 50 ಲಕ್ಷ ದೋಚಿ ಪರಾರಿಯಾದ ದುಷ್ಕರ್ಮಿಗಳು

ತಿರುವನಂತಪುರ: ಗುತ್ತಿಗೆದಾರರೊಬ್ಬರ ಕಾರು ಅಡ್ಡಗಟ್ಟಿ 50 ಲಕ್ಷ ದರೋಡೆ ಮಾಡಿ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ದೇವರಪುರ ಬಳಿ ನಡೆದಿದೆ.

ಕೇರಳದ ಮಲಪ್ಪುರಂ ಮೂಲದ ಗುತ್ತಿಗೆದಾರ ಶಂಜಾದ್, ತನ್ನ ಕಾರು ಅಡ್ಡಗಟ್ಟಿ ಕಾರಿನ ಸಮೇತ 50 ಲಕ್ಷ ದೋಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೈಸೂರಿನಲ್ಲಿ ಚಿನ್ನಾಭರಣ ಮಾರಾಟ ಮಾಡಿ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಕಾಮಗಾರಿಗಾಗಿ ಪತ್ನಿಯ 750 ಗ್ರಾಂ ಚಿನ್ನ ಮಾರಿದ್ದೇನೆ. ಸ್ನೇಹಿತ ಅಘ್ನು ಜೊತೆ ಕೇರಳಕ್ಕೆ ಹೋಗುತ್ತಿದ್ದಾಗ ಕಾರು ಅಡ್ಡಗಟ್ಟಿ ದರೋಡೆ ಮಾಡಲಾಗಿದೆ ಎಂದು ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಸದ್ಯ ಕಾರು ವಿರಾಜಪೇಟೆ ಸಮೀಪದ ಕೊಳತ್ತೋಡು ಬಳಿ ಪತ್ತೆಯಾಗಿದೆ. ದುಷ್ಕರ್ಮಿಗಳಿಗಾಗಿ ಪೊಲಿಸರು ಹುಡುಕಾಟ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular