HomeIndiaಗಮನಿಸಿ : ಆನ್ ಲೈನ್ ನಲ್ಲಿ ‘VOTER ID’ ಪಡೆಯುವುದು ಬಹಳ ಸುಲಭ, ಜಸ್ಟ್ ಹೀಗೆ...

ಗಮನಿಸಿ : ಆನ್ ಲೈನ್ ನಲ್ಲಿ ‘VOTER ID’ ಪಡೆಯುವುದು ಬಹಳ ಸುಲಭ, ಜಸ್ಟ್ ಹೀಗೆ ಮಾಡಿ

ಇನ್ಮುಂದೆ ಮನೆಯಲ್ಲಿ ಕುಳಿತು ಸೆಕೆಂಡುಗಳಲ್ಲಿ ನಿಮ್ಮ ಮತದಾರರ ಗುರುತಿನ ಚೀಟಿಯನ್ನು ಡೌನ್ಲೋಡ್ ಮಾಡಬಹುದು. ಭಾರತದ ಚುನಾವಣಾ ಆಯೋಗವು ಹೊಸ ಸೌಲಭ್ಯವೊಂದು ಒದಗಿಸಿದೆ.

ಹೊಸದಾಗಿ ವೋಟರ್ ಐಡಿ ಪಡೆದುಕೊಳ್ಳುವವರು ಯಾವುದೇ ಸರ್ಕಾರಿ ಕಚೇರಿಗೂ ಹೋಗಬೇಕಾಗಿಲ್ಲ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಪೋಸ್ಟ್ ಮೂಲಕ ಹೊಸ ವೋಟರ್ ಐಡಿ ಮನೆ ಬಾಗಿಲಿಗೆ ಬರುವಂತೆ ಮಾಡಿಕೊಳ್ಳಬಹುದು.
https://voters.eci.gov.in/ ಮೊದಲು ಈ ವೆಬ್ಸೈಟ್ ಗೆ ಭೇಟಿ ನೀಡಿ. ಮುಖಪುಟದಲ್ಲಿ ರಿಜಿಸ್ಟ್ರೇಷನ್ (registration for new voter ID) ಮಾಡಲು ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿ ಮುಂದೆ ಹೋಗಿ. ನಂತರ ನೀವು ಫಾರಂ ಭರ್ತಿ ಮಾಡಿದ ನಂತರ ವೋಟರ್ ಐಡಿ ನಿಮ್ಮ ಮನೆ ಬಾಗಿಲಿಗೆ ಪೋಸ್ಟ್ ಮೂಲಕ ಬರುತ್ತದೆ.

ಇ-ಮತದಾರರ ಗುರುತಿನ ಚೀಟಿಯನ್ನು (ಇ-ಎಪಿಕ್) ಮೊಬೈಲ್ ಅಥವಾ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ ಸಹಾಯದಿಂದ ಆನ್ಲೈನ್ನಲ್ಲಿ ಸುಲಭವಾಗಿ ಡೌನ್ಲೋಡ್ ಮಾಡಬಹುದು. ಇದಕ್ಕಾಗಿ, ವೆಬ್ಸೈಟ್ನಲ್ಲಿ ಹಲವಾರು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಈ ಹೊಸ ವ್ಯವಸ್ಥೆಯಡಿ, ಮೊಬೈಲ್ ಸಂಖ್ಯೆಯ ನೋಂದಣಿಯೊಂದಿಗೆ ಕೆಲವೇ ಸೆಕೆಂಡುಗಳಲ್ಲಿ ಇ-ಮತದಾರರ ಗುರುತಿನ ಚೀಟಿಯನ್ನು ಪಡೆಯಬಹುದು.
ನಿಮ್ಮ ಬಳಿ ಇರುವ ವೋಟರ್ ಐಡಿ ಕರೆಕ್ಷನ್ ಮಾಡಿಕೊಳ್ಳಲು ಕೂಡ ಇಲ್ಲಿ ಅವಕಾಶ ನೀಡಲಾಗಿದೆ. ನಿಮ್ಮ ಆಧಾರ್ ಸಂಖ್ಯೆ ಹಾಗೂ ಇತರ ಮಾಹಿತಿಗಳನ್ನು ನೀಡುವುದರ ಮೂಲಕ ಹೊಸ ವೋಟರ್ ಐಡಿ ಪಡೆದುಕೊಳ್ಳಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆನ್ಲೈನ್ ನಲ್ಲಿ ಇ-ವೋಟರ್ ಐಡಿ ಪಡೆಯುವುದು ಹೇಗೆ?

ಮೊದಲು https://voters.eci.gov.in/ ಎನ್ ವಿಎಸ್ ಪಿ ಪೋರ್ಟಲ್ ಗೆ ಲಾಗ್ ಇನ್ ಮಾಡಿ.
ನಂತರ ಮುಖಪುಟದಲ್ಲಿ ‘ಇ-ಎಪಿಕ್ ಡೌನ್ಲೋಡ್’ ಆಯ್ಕೆಯನ್ನು ಆರಿಸಿ.
ನಂತರ ಪರದೆಯ ಮೇಲೆ ಕೇಳಿದಂತೆ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ಐಡಿ ಅಥವಾ ಎಪಿಕ್ ಸಂಖ್ಯೆಯನ್ನು ನಮೂದಿಸಿ ಮತ್ತು ಸಲ್ಲಿಸಿ ಬಟನ್ ಒತ್ತಿ.
ನಂತರ ‘ರಿಕ್ವೆಸ್ಟ್ ಒಟಿಪಿ’ ಕ್ಲಿಕ್ ಮಾಡಿ ಮತ್ತು ನಿಮ್ಮ ಫೋನ್ ಗೆ ಒಟಿಪಿ ಬರುತ್ತದೆ.
ಈ ಒಟಿಪಿಯನ್ನು ಗೊತ್ತುಪಡಿಸಿದ ಪೆಟ್ಟಿಗೆಯಲ್ಲಿ ನಮೂದಿಸಬೇಕು.
ಅಂತಿಮವಾಗಿ ಡಿಜಿಟಲ್ ಮತದಾರರ ಗುರುತಿನ ಚೀಟಿ ಡೌನ್ಲೋಡ್ ಮಾಡಲು ‘ಇ-ಎಪಿಕ್ ಡೌನ್ಲೋಡ್’ ಆಯ್ಕೆಯನ್ನು ಕ್ಲಿಕ್ ಮಾಡಿ.

ಇದರೊಂದಿಗೆ, ನೀವು ಮನೆಯಲ್ಲಿ ಕುಳಿತು ಪಿಡಿಎಫ್ ರೂಪದಲ್ಲಿ ಮತದಾರರ ಐಡಿಯನ್ನು ಸುಲಭವಾಗಿ ಪಡೆಯಬಹುದು.ಭೌತಿಕ ಕಾರ್ಡ್ ಬಯಸುವವರು ಹತ್ತಿರದ ಮೀ-ಸೇವಾ ಅಥವಾ ಇಂಟರ್ನೆಟ್ ಕೇಂದ್ರಕ್ಕೆ ಹೋಗಿ ಮತದಾರರ ಗುರುತಿನ ಚೀಟಿಯನ್ನು ಭೌತಿಕವಾಗಿ ಪಡೆಯಬಹುದು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular