HomeIndiaಉತ್ತರಕಾಶಿ ಸುರಂಗದಿಂದ ಹೊರಬಂದ ಸಂತಸದಲ್ಲಿದ್ದ ಕಾರ್ಮಿಕನಿಗೆ ಪಿತೃ ವಿಯೋಗದ ಶೋಕ..!

ಉತ್ತರಕಾಶಿ ಸುರಂಗದಿಂದ ಹೊರಬಂದ ಸಂತಸದಲ್ಲಿದ್ದ ಕಾರ್ಮಿಕನಿಗೆ ಪಿತೃ ವಿಯೋಗದ ಶೋಕ..!

ಉತ್ತರಾಖಂಡದ ಸಿಲ್ಕ್ಯಾರಾ-ಬಾರ್ಕೋಟ್ ಸುರಂಗದೊಳಗೆ ಸಿಲುಕಿದ್ದ 41 ಕಾರ್ಮಿಕರನ್ನು ಸ್ಥಳಾಂತರಿಸುವ ರಕ್ಷಣಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆದಿದ್ದು, ರಕ್ಷಣಾ ಸಿಬ್ಬಂದಿಗಳ ಕಾರ್ಯಕ್ಕೆ ದೇಶವ್ಯಾಪ್ತಿ ಮೆಚ್ಚುಗೆ ವ್ಯಕ್ತವಾಗಿದೆ.

ಉತ್ತರಕಾಶಿ ಸುರಂಗದಿಂದ ಹೊರಬಂದ ಸಂತಸದಲ್ಲಿದ್ದ ಕಾರ್ಮಿಕನಿಗೆ ಪಿತೃ ವಿಯೋಗದ ಶೋಕ ಆವರಿಸಿದೆ. ಜಾರ್ಖಂಡ್ ರಾಜ್ಯದ ಪೂರ್ವ ಸಿಂಗ್ಭುಮ್ ಜಿಲ್ಲೆಯಲ್ಲಿ 70 ವರ್ಷ ವಯಸ್ಸಿನ ವೃದ್ದ ವ್ಯಕ್ತಿ ಬರ್ಸಾ ಮುರ್ಮು ಅವರ ಮಗ 28 ವರ್ಷ ವರ್ಷ ವಯಸ್ಸಿನ ಭಕ್ತು ಎಂಬಾತ ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿದ್ದನು.
ವಯೋಸಹಜ ಕಾಯಿಲೆಗಳಿಂದಲೂ ಬಳಲುತ್ತಿದ್ದ ಮುರ್ಮು ಅವರು ತನ್ನ ಮಗನ ಬರುವಿಕೆಗಾಗಿ ದಾರಿ ಕಾಯುತ್ತಿದ್ದರು.

ನವೆಂಬರ್ 28 ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಸುರಂಗದಲ್ಲಿದ್ದ ಎಲ್ಲ ಕಾರ್ಮಿಕರನ್ನೂ ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ . ಭಕ್ತು ಸುರಂಗದಿಂದ ಹೊರಬಂದೆ ಎಂಬ ಸಂತಸದಲ್ಲಿದದ್ದಾಗಲೇ ಅವರಿಗೆ ಪಿತೃ ವಿಯೋಗದ ಶೋಕ ಆವರಿಸಿದೆ . ಭುಕ್ತು ಸುರಂಗದಿಂದ ಹೊರಬರುವ 12 ಗಂಟೆಗಳ ಮುನ್ನವೇ ಅವರ ತಂದೆ ಮೃತಪಟ್ಟಿದ್ದರು. ಉತ್ತರಕಾಶಿ ಸುರಂಗದಿಂದ ಹೊರಬಂದ ಸಂತಸದಲ್ಲಿದ್ದ ಕಾರ್ಮಿಕನಿಗೆ ಪಿತೃ ವಿಯೋಗದ ಶೋಕ ಎದುರಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular