
ಮೃತರನ್ನು ಸಿದ್ರಾಮಪ್ಪ ಕಾಮನ್ (75) ಎಂದು ಗುರುತಿಸಲಾಗಿದೆ. ಆಕಾಶ್ ಕಾಮನ್ ಎಂಬಾತ ಈ ಕೃತ್ಯ ಎಸಗಿದ್ದಾನೆ.
ಯಾವುದೋ ಕಾರಣಕ್ಕೆ ಅಜ್ಜ ಸಿದ್ರಾಮಪ್ಪ ಕಾಮನ್ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ ಎಂದು ಹೇಳಲಾಗಿದ್ದು, ಇದರಿಂದ ರೊಚಿಗೆದ್ದ ಮೊಮ್ಮಗ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ರಕ್ತದ ಮಡುವಿನಲ್ಲಿ ಒದ್ದಾಡಿದ ವೃದ್ದ ಪ್ರಾಣ ಬಿಟ್ಟಿದ್ದಾರೆ. ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಆಕಾಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

