HomeKarnatakaರಾಜ್ಯ ಸರ್ಕಾರದಿಂದ 2024 ನೇ ಸಾಲಿನ ‘ಸಾರ್ವತ್ರಿಕ ರಜೆ’ಗಳ ಪಟ್ಟಿ ಬಿಡುಗಡೆ : ಇಲ್ಲಿದೆ ಮಾಹಿತಿ...

ರಾಜ್ಯ ಸರ್ಕಾರದಿಂದ 2024 ನೇ ಸಾಲಿನ ‘ಸಾರ್ವತ್ರಿಕ ರಜೆ’ಗಳ ಪಟ್ಟಿ ಬಿಡುಗಡೆ : ಇಲ್ಲಿದೆ ಮಾಹಿತಿ |Karnataka Holiday List 2024

ಬೆಂಗಳೂರು : ರಾಜ್ಯ ಸರ್ಕಾರ 2024 ನೇ ಸಾಲಿನ ‘ಸಾರ್ವತ್ರಿಕ ರಜೆ’ ಗಳ ಪಟ್ಟಿ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

ಸಾರ್ವತ್ರಿಕ ರಜಾ ದಿನಗಳ ಪಟ್ಟಿ

ದಿನಾಂಕ 15-01-2024 ಸೋಮವಾರ – ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
ದಿನಾಂಕ 26-01-2024 ಶುಕ್ರವಾರ-ಗಣರಾಜ್ಯೋತ್ಸ
ದಿನಾಂಕ 08-03-2024- ಶುಕ್ರವಾರ – ಮಹಾಶಿವರಾತ್ರಿ
ದಿನಾಂಕ 29-03-2024ರಂದು ಶುಕ್ರವಾರ -ಗುಡ್ ಪ್ರೈಡೆ
ದಿನಾಂಕ 09-04-2024 – ಮಂಗಳವಾರ – ಯುಗಾದಿ ಹಬ್ಬ
ದಿನಾಂಕ 11-04-2024 – ಗುರುವಾರ ಖುತುಬ್ ಎ ರಂಜಾನ್
ದಿನಾಂಕ 01-05-2024ರಂದು ಬುಧವಾರ – ಕಾರ್ಮಿಕರ ದಿನಾಚರಣೆ
ದಿನಾಂಕ 10-05-2024ರ ಶುಕ್ರವಾರ – ಬಸವ ಜಯಂತಿ, ಅಕ್ಷಯ ತೃತೀಯ
ದಿನಾಂಕ 17-06-2024ರ ಸೋಮವಾರ – ಬಕ್ರೀದ್
ದಿನಾಂಕ 17-07-2024ರ ಬುಧವಾರ – ಮೋಹರಂ ಕಡೇ ದಿನ
ದಿನಾಂಕ 15-08-2024ರ ಗುರುವಾರ – ಸ್ವಾತಂತ್ರ್ಯ ದಿನಾಚರಣೆ
ದಿನಾಂಕ 07-09-2024ರ ಶನಿವಾರ – ವರಸಿದ್ಧಿ ವಿನಾಯಕ ವ್ರತ
ದಿನಾಂಕ 16-09-2024ರ ಸೋಮವಾರ – ಈದ್ ಮಿಲಾದ್
ದಿನಾಂಕ 02-10-2024ರ ಬುಧವಾರ – ಗಾಂಧಿ ಜಯಂತಿ, ಮಹಾಲಯ ಅಮವಾಸೆ
ದಿನಾಂಕ 11-10-2024ರ ಶುಕ್ರವಾರ – ಮಹಾನವಮಿ, ಆಯುಧಪೂಜೆ
ದಿನಾಂಕ 17-10-2024ರ ಗುರುವಾರ – ಮಹರ್ಷಿ ವಾಲ್ಮೀಕಿ ಜಯಂತಿ
ದಿನಾಂಕ 31-10-2024ರ ಗುರುವಾರ – ನರಕ ಚತುರ್ದಶಿ
ದಿನಾಂಕ 01-11-2024ರ ಶುಕ್ರವಾರ – ಕನ್ನಡ ರಾಜ್ಯೋತ್ಸವ
ದಿನಾಂಕ 02-11-2024ರ ಶನಿವಾರ – ಬಲಿಪಾಡ್ಯಮಿ, ದಿಪಾವಳಿ
ದಿನಾಂಕ 18-11-2024ರ ಸೋಮವಾರ – ಕನಕದಾಸ ಜಯಂತಿ
ದಿನಾಂಕ 25-12-2024ರ ಬುಧವಾರ – ಕ್ರಿಸ್ ಮಸ್

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸೂಚನೆ:

1. ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಡಾ|| ಬಿ. ಆರ್. ಅಂಬೇಡ್ಕರ್ ಜಯಂತಿ (14.04.2024) ಮತ್ತು ಮಹಾವೀರ ಜಯಂತಿ (21.04.2024) ಹಾಗೂ ಎರಡನೇ ಶನಿವಾರದಂದು ಬರುವ ವಿಜಯದಶಮಿ (12.10.2024) ಈ ರಜೆ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲ.

2. ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಛೇರಿಗಳು ಮುಚ್ಚಲ್ಪಡುತ್ತವೆ. ಕಛೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ಥರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು.
3. ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗಧಿತ ದಿನಾಂಕದಂದು ಬೀಳದಿದ್ದರೆ ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗಧಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದು.

4. ದಿನಾಂಕ:03.09.2024 (ಮಂಗಳವಾರ) ಕೈಲ್ ಮೂಹೂರ್ತ, ದಿನಾಂಕ:17.10.2024 (ಗುರುವಾರ) ತುಲಾ ಸಂಕ್ರಮಣ ಹಾಗೂ ದಿನಾಂಕ:14.12.2024 (ಶನಿವಾರ) ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಿದೆ.

 

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular