ಬೆಂಗಳೂರು : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳುಗಳಲ್ಲಿ ಏನೂ ಆಗಿಲ್ಲ. ಅನೇಕ ಕಪ್ಪು ಚುಕ್ಕೆಗಳು ಕಾಣಿಸುತ್ತಿವೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ ಸರ್ಕಾರದ ಕಿವಿ ಹಿಂಡುವ ಕೆಲಸಗಳನ್ನ ಸದನದಲ್ಲಿ ಮಾಡುತ್ತೇವೆ, ಅದಕ್ಕೂ ಬಗ್ಗದೇ ಹೋದರೆ ಉಗ್ರ ಹೋರಾಟ ಮಾಡುತ್ತೇವೆ. ವರ್ಗಾವಣೆಯಲ್ಲಿ ಸರ್ಕಾರ ಮುಳುಗಿದೆ ಎಂದು ಕಿಡಿಕಾರಿದರು.
ನಮ್ಮ ಪ್ರಧಾನಿಗಳು ನಡ್ಡಾ, ಅಮೀತ್ ಶಾ, ಸಂತೋಷ್ ಜೀ, ಬಿಎಸ್ವೈ, ಬೊಮ್ಮಾಯಿ ಗಣ್ಯರೆಲ್ಲ ಪಕ್ಷದ ನಾಯಕರ ಜೊತೆ ಚರ್ಚೆ ಮಾಡಿ ನನ್ನನ್ನು ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಿದ್ದಾರೆ. ವಿಪಕ್ಷ ನಾಯಕರ ಕಚೇರಿಗೆ ಇಂದು ಪೂಜೆ ಮಾಡಿ ವಿದ್ಯುಕ್ತವಾಗಿ ಅಧಿಕಾರ ಸ್ವೀಕಾರ ಮಾಡಿದ್ದೇನೆ. ಯತ್ನಾಳ್ ಹಾಗೂ ಸೋಮಣ್ಣ ಅಸಮಾಧಾನ ಕುರಿತು ಮಾತನಾಡಿದ ಅವರು ಅವರ ಜೊತೆ ಇನ್ನೊಂದು ಸುತ್ತಿನ ಮಾತುಕತೆ ನಡೆಸುತ್ತೇವೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದರು.