HomeKarnatakaBIGG NEWS : ರಾಜ್ಯದಲ್ಲಿ `ವಿದ್ಯುತ್ ಅವಘಡ’ ತಡೆಗೆ ಇಂಧನ ಇಲಾಖೆಯಿಂದ `ಗೈಡ್ ಲೈನ್’ ಪ್ರಕಟ

BIGG NEWS : ರಾಜ್ಯದಲ್ಲಿ `ವಿದ್ಯುತ್ ಅವಘಡ’ ತಡೆಗೆ ಇಂಧನ ಇಲಾಖೆಯಿಂದ `ಗೈಡ್ ಲೈನ್’ ಪ್ರಕಟ

ಬೆಂಗಳೂರು : ರಾಜ್ಯದಲ್ಲಿ ವಿದ್ಯುತ್ ಅವಘಡಗಳ ತಡೆಗಾಗಿ ಇಂಧನ ಇಲಾಖೆಯು ಎಲ್ಲಾ ಎಸ್ಕಾಂಗಳಿಗೆ ಸುರಕ್ಷತಾ ಮಾರ್ಗಸೂಚಿ ಹೊರಡಿಸಿದ್ದು, ಈ ಕ್ರಮಗಳನ್ನು ತಕ್ಷಣದಿಂದಲೇ ಅನುಷ್ಠಾನಕ್ಕೆ ತರುವಂತೆ ಆದೇಶಿಸಿದೆ.

ಇಂಧನ ಇಲಾಖೆ ಹೊರಡಿಸಿರುವ ಮಾರ್ಗಸೂಚಿಯನ್ವಯ ಸುರಕ್ಷತಾ ಅಂಶಗಳು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1) ವಿದ್ಯುತ್ ಅಪಘಾತಗಳನ್ನು ತಡೆಯುವ ಬಗ್ಗೆ, ಕಂಪನಿಗಳ ಎಲ್ಲಾ ಹಂತದ ಅಧಿಕಾರಿಗಳು ಮತ್ತು ನೌಕರರು/ಹೊರ ಗುತ್ತಿಗೆ  ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ Substation Staff ರವರಿಗೆ ತಿಳುವಳಿಕೆಯ ತರಬೇತಿಯನ್ನು ಕಡ್ಡಾಯವಾಗಿ ನೀಡುವುದು.

2)  ವಿದ್ಯುತ್ ಅಪಘಾತಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವ್ಯಾಪಕ ಪ್ರಚಾರ ನಡೆಸುವುದು ಹಾಗೂ ಟೆಲಿವಿಷನ್, ರೇಡಿಯೋ, ಸೋಷಿಯಲ್ ಮೀಡಿಯ, ವಾರ್ತಾಪತ್ರಿಕೆಗಳಲ್ಲಿ ಜಾಹೀರಾತು ನೀಡುವುದು.

3) ವಿದ್ಯುತ್ ಪರಿವೀಕ್ಷಣಾ ಇಲಾಖೆಯ ಅಧಿಕಾರಿಗಳು Safety Regulations ಪ್ರಕಾರ ಕಾಲಕಾಲಕ್ಕೆ ಪರಿಶೀಲನೆಯನ್ನು ಪರಿಣಾಮಕಾರಿಯಾಗಿ ನಡೆಸಿ, ನ್ಯೂನ್ಯತೆಗಳನ್ನು – Hazardous Locations/Safe clearances  d on w ಮಾಹಿತಿಯನ್ನು ವಿಸಕಂ/ಕವಿಪ್ರನಿನಿಗೆ ಸಲ್ಲಿಸಿ, ಪ್ರತಿಯನ್ನು ಇಂಧನ ಇಲಾಖೆಗೆ ಸಲ್ಲಿಸುವುದು.

4) w 9..0 Uniform Standard Operating Procedure ಅಳವಡಿಸುವ  ಸಂಬಂಧ ವ್ಯವಸ್ಥಾಪಕ ನಿರ್ದೇಶಕರು, ಕವಿಪ್ರನಿನಿ ರವರ ಅಧ್ಯಕ್ಷತೆಯಲ್ಲಿ ರಚಿಸಿರುವ “ಸಮನ್ವಯ ಸಮಿತಿ” ಯಲ್ಲಿ ಕೂಲಂಕಷವಾಗಿ ಚರ್ಚಿಸಿ, ಮಾರ್ಗಸೂಚಿಗಳನ್ನು ಹೊರಡಿಸಿ ಅನುಷ್ಠಾನಗೊಳಿಸುವುದು.

5) ವಿದ್ಯುತ್ ಜಾಲದ ಮತ್ತು ಉಪಕರಣಗಳ ಕಾಲಕಾಲದ ಸಮರ್ಪಕ ನಿರ್ವಹಣೆಯನ್ನು KERC/KPTCL & Safety Manual  ಪಕಾರ ನಡೆಸುತ್ತಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವ ಮೇಲ್ವಿಚಾರಣೆಯನ್ನು ಎಲ್ಲಾ ಹಂತದ ಕಛೇರಿಗಳಲ್ಲಿ ಹಾಗೂ ನಿಗಮ ಮಟ್ಟದಲ್ಲಿ

6) ವಿದ್ಯುತ್ ಪರಿವೀಕ್ಷಕರು, RT/R&D/TAQC/Hot Lines ಕವಿಪುನಿನಿ ಮತ್ತು ವಿಸಕಂಗಳ Quality Standards & Safety Section/HT/LT Rating e, Inspection by Higher Officers ರವರು ನೀಡಿರುವ Observations ಗಳಿಗೆ ಅನುಸರಣಾ ಕ್ರಮ ವಹಿಸುವುದನ್ನು ನಿಗಮ ಕಛೇರಿಯಲ್ಲಿ ಪರಿಶೀಲಿಸುವುದು.

7) ಉಪಕೇಂದ್ರಗಳ Operatorಗಳು ಯಾವುದೇ 11 ಕೆವಿ ಮಾರ್ಗಗಳು Double OCR & EFR/EFR ಮೂಲಕ ಟ್ರಿಪ್ ಆದಾಗ ಸಂಬಂಧಪಟ್ಟ ಶಾಖಾಧಿಕಾರಿ/ಉಪವಿಭಾಗಾಧಿಕಾರಿ ರವರನ್ನು ಸಂಪರ್ಕಿಸಿ, ಅವರ  ಸಹಮತದೊಂದಿಗೆ ಮಾರ್ಗಗಳ Test Charge ಮಾಡತಕ್ಕದ್ದು. ಈ ನಿಟ್ಟಿನಲ್ಲಿ ಪ್ರತಿ ಉಪಕೇಂದ್ರಗಳ Operatorಗಳು ಸದರಿ ವಿಷಯದ ಬಗ್ಗೆ ಮಾಹಿತಿಯನ್ನು ಹೊಂದಿರುವುದನ್ನು ಆಯಾ ಕ್ಷೇತ್ರದ ನೋಡಲ್ ಅಧಿಕಾರಿ/Substation maintenance head ರವರು ಖಾತ್ರಿಪಡಿಸಿಕೊಳ್ಳುವುದು.

8) ಪ್ರತಿ ವಿಸಕಂಗಳ ಮಟ್ಟದಲ್ಲಿ ಕವಿಪನಿನಿ ಅಧಿಕಾರಿಗಳನ್ನು ಒಳಗೊಂಡಂತೆ ತಿಂಗಳಿಗೊಮ್ಮೆ Safety Day ಕಾರ್ಯಕ್ರಮವನ್ನು ಹಮ್ಮಿಕೊಂಡು Best Practices ಬಗ್ಗೆ ವಿಚಾರ  ವಿನಿಮಯ ಮಾಡಿಕೊಂಡು ಅಳವಡಿಸಿಕೊಳ್ಳುವುದು. ನಿಗಮ ಮಟ್ಟದಲ್ಲಿ ಈ ಪ್ರಕ್ರಿಯೆಯ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಮೇಲ್ವಿಚಾರಣೆ ನಡೆಸುವುದು.

ಮೇಲಿನ ಅಂಶಗಳನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡು, ಪ್ರತಿ ವಿಸಕಂಗಳ ವ್ಯವಸ್ಥಾಪಕ ನಿರ್ದೇಶಕರು/ನಿರ್ದೇಶಕರು  (ತಾಂತ್ರಿಕ) ರವರು ತಮ್ಮ ವೈಯಕ್ತಿಕ ಗಮನದೊಂದಿಗೆ ವಿದ್ಯುತ್ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯವಹಿಸಲು ಹಾಗೂ ಕರ್ತವ್ಯ ನಿರ್ಲಕ್ಷ್ಯತೆ ತೋರುವ ಅಧಿಕಾರಿ/ನೌಕರರ ವಿರುದ್ಧ ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular