HomeKarnatakaBIG NEWS: ಸ್ವಾಗತ ಭಾಷಣದ ವೇಳೆ ಸಚಿವರ ಎಡವಟ್ಟು; 'ಡಿಸಿಎಂ' ಬದಲಿಗೆ 'ಸಿಎಂ' ಡಿ.ಕೆ.ಶಿವಕುಮಾರ್ ಎಂದ...

BIG NEWS: ಸ್ವಾಗತ ಭಾಷಣದ ವೇಳೆ ಸಚಿವರ ಎಡವಟ್ಟು; ‘ಡಿಸಿಎಂ’ ಬದಲಿಗೆ ‘ಸಿಎಂ’ ಡಿ.ಕೆ.ಶಿವಕುಮಾರ್ ಎಂದ ಮಂಕಾಳ ವೈದ್ಯ

ಬೆಂಗಳೂರು: ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೀನುಗಾರಿಕಾ ಹಾಗೂ ಬಂದರು ಸಚಿವ ಮಂಕಾಳ ವೈದ್ಯ ಎಡವಟ್ಟು ಮಾಡಿಕೊಂಡಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಸಿಎಂ ಎಂದು ಸ್ವಾಗತಿಸಿದ ಘಟನೆ ನಡೆದಿದೆ.

ರಾಜ್ಯದಲ್ಲಿ ಅಧಿಕಾರ ಹಸ್ತಾಂತರ, ಸಿಎಂ ಕುರ್ಚಿಗಾಗಿ ಪೈಪೋಟಿ ವಿಚಾರವಾಗಿ ಭಾರಿ ಚರ್ಚೆ ನಡೆದಿರುವ ಸಂದರ್ಭದಲ್ಲೇ ಸಚಿವರು ಸ್ವಾಗತ ಭಾಷಣದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಮ್ಮುಖದಲ್ಲಿಯೇ ಡಿಸಿಎಂ ಅವರನ್ನು ಸಿಎಂ ಎಂದು ಸ್ವಾಗತಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಧಾನಸೌಧದಲ್ಲಿ ವಿಶ್ವ ಮೀನುಗಾರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸ್ವಾಗತ ಭಾಷಣ ಮಾಡಿದ ಸಚಿವ ಮಂಕಾಳ ವೈದ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸ್ವಾಗತ ಎಂದು ಹೇಳುವ ಬದಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸ್ವಾಗತ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular