HomeKarnatakaBIG NEWS: ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ವಂಚನೆ; 6 ಆರೋಪಿಗಳು ಅರೆಸ್ಟ್

BIG NEWS: ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ವಂಚನೆ; 6 ಆರೋಪಿಗಳು ಅರೆಸ್ಟ್

ಬೆಂಗಳೂರು: ನಕಲಿ ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿ ವಂಚಿಸುತ್ತಿದ್ದ ಜಾಲವನ್ನು ಸಿಸಿಬಿ ಸೈಬರ್ ಕ್ರೈಂ ಪೊಲೀಸರು ಪತ್ತೆ ಮಾಡಿದ್ದು, 6 ಆರೊಪಿಗಳನ್ನು ಬಂಧಿಸಿದ್ದಾರೆ.

ಕೇರಳ ಮೂಲದ ಸಮೀರ್, ಮಹಮ್ಮದ್ ಹಸನ್, ಅಮೂಲ್ ಬಾಬು, ಮಹಮ್ಮದ್ ಇರ್ಫಾನ್, ತಂಝಿಲ್, ಮಂಜುನಾಥ್ ಬಂಧಿತರು. ಆರೋಪಿಗಳು, ಜನರ ಕೆವೈಸಿ ದಾಖಲೆಗಳನ್ನು ಪಡೆದು ನಕಲಿ ಬ್ಯಾಂಕ್ ಖಾತೆಗಳನ್ನು ಓಪನ್ ಮಾಡಿ ವಹಿವಾಟು ನಡೆಸುತ್ತಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆಧಾರ್, ಪಾನ್ ಕಾರ್ಡ್, ಒಂದು ಸಹಿಗೆ 10 ಸಾವಿರ ರೂಪಾಯಿ ರೇಟ್ ಫಿಕ್ಸ್ ಮಾಡುತ್ತಿದ್ದರು. ಬೇನಾಮಿ ಹೆಸರಲ್ಲಿ ಖಾತೆ ತೆರೆದು ಬೆಂಗಳೂರಿನಲ್ಲಿ ವಹಿವಾಟು ನಡೆಸುತ್ತಿದ್ದರು. ಆರೋಪಿಗಳನ್ನು ಬಂಧಿಸಿರುವ ಪೊಲೀಸರು 150ಕ್ಕೂ ಹೆಚ್ಚು ಬೇನಾಮಿ ಖಾತೆಗಳನ್ನು ಫ್ರೀಜ್ ಮಾಡಿದ್ದಾರೆ. ಈ ಖಾತೆಗಳಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಸಲಾಗಿದೆ.

ದುಬೈನಲ್ಲಿರುವ ಕಿಂಗ್ ಪಿನ್ ಬಂಧಿತ ಆರೊಪಿಗಳಿಗೆ ಅಲ್ಲಿಂದಲೇ ಸೂಚನೆ ನೀಡುತ್ತಿದ್ದ. ಆತನ ಸೂಚನೆಯಂತೆ ಆರೋಪಿಗಳು ವ್ಯವಹರಿಸುತ್ತಿದ್ದರು ಎಂದು ತಿಳಿದುಬಂದಿದೆ. ಮತ್ತಿಕೆರೆಯಲ್ಲಿ ಕಚೇರಿ ತೆರೆದಿದ್ದರು. ಮಂಜೇಶ್ ಎಂಬಾತ ತನ್ನ ಸ್ನೇಹಿತನ ಜೊತೆ ಈ ಕಚೇರಿಗೆ ಭೇಟಿ ನೀಡಿದಾಗ ದಾಖಲೆಗಳ ರಾಶಿ, ಬ್ಯಾಂಕ್ ಬುಕ್ ಗಳನ್ನು ಕಂಡು ಅನುಮಾನಗೊಂಡಿದ್ದ. ತಕ್ಷಣ ಸೈಬರ್ ಕ್ರೈಂ ಗೆ ಮಾಹಿತಿ ನೀಡಿದ್ದ. ಪರಿಶೀಲನೆ ನಡೆಸಿದ ಪೊಲೀಸರಿಗೆ ನಕಲಿ ಬ್ಯಾಂಕ್ ಖಾತೆ ಜಾಲದ ಬಗ್ಗೆ ಗೊತ್ತಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular