HomeKarnatakaBREAKING : ಮೀಟರ್ ಬಡ್ಡಿ ದಂಧೆಕೋರರಿಗೆ ಬಿಗ್ ಶಾಕ್ : ಬೆಂಗಳೂರಿನ ಹಲವೆಡೆ 'CCB' ದಾಳಿ,...

BREAKING : ಮೀಟರ್ ಬಡ್ಡಿ ದಂಧೆಕೋರರಿಗೆ ಬಿಗ್ ಶಾಕ್ : ಬೆಂಗಳೂರಿನ ಹಲವೆಡೆ ‘CCB’ ದಾಳಿ, ಹಣ- ಚಿನ್ನಾಭರಣ ಜಪ್ತಿ

ಬೆಂಗಳೂರು : ಬೆಂಗಳೂರಿನಲ್ಲಿ ಮೀಟರ್ ಬಡ್ಡಿ ದಂಧೆಕೋರರಿಗೆ ಬಿಗ್ ಶಾಕ್ ಎದುರಾಗಿದ್ದು, ಬೆಂಗಳೂರಿನ ಹಲವೆಡೆ ಸಿಸಿಬಿ ದಾಳಿ ನಡೆಸಿ ಹಣ-ಆಸ್ತಿಪಾಸ್ತಿ ಜಪ್ತಿ ಮಾಡಿದೆ.

ಬೆಂಗಳೂರಿನ ನಾಲ್ಕು ಕಡೆ ಸಿಸಿಬಿ ದಾಳಿ ನಡೆಸಿದ್ದು, ನಗದು, ಹಣ ಹಾಗೂ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದೆ. ಚಾಮರಾಜಪೇಟೆ, ಬಸವೇಶ್ವರನಗರ, ಸಿಟಿ ಮಾರ್ಕೆಟ್ , ಕಾಮಾಕ್ಷಿ ಪಾಳ್ಯದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ.
ಎಎಸ್ ಐ ಮಗಳಾದ ಶೀಲಾ ಎನ್ನುವವರ ಮನೆ ಹಾಗೂ ಕಾಮಾಕ್ಷಿಪಾಳ್ಯದಲ್ಲಿ ಜಗದೀಶ್ ಅಲಿಯಾಸ್ ಟಾಮಿ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಶಕ್ ನೀಡಿದ್ದಾರೆ. ಮೀಡರ್ ಬಡ್ಡಿ ದಂಧೆ ನಡೆಸುತ್ತಿದ್ದ ಅವರ ಮೇಲೆ ಮನಿ ಲಾಂಡರಿಂಗ್ ಕಾಯಿದೆಯಡಿ ಕೇಸ್ ದಾಖಲಿಸಲಾಗಿದೆ.

ದಾಳಿ ವೇಳೆ 42 ಲಕ್ಷ ಹಣ, ಚಿನ್ನಾಭರಣ, ಪಾಸ್ ಪುಸ್ತಕ ಸೇರಿದಂತೆ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular