ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾಘನ್ ಐಸಿಸಿ ವಿಶ್ವಕಪ್ 2023 ಸಂಬಂಧ ಭಾರತ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ಭಾರತದ ಆರ್ಥಿಕ ರಾಜಧಾನಿ ಮುಂಬೈ ಬಗ್ಗೆ ತಮಗಿರುವ ಒಲವಿನ ಬಗ್ಗೆ ಮಾತನಾಡಿದ್ದಾರೆ. ನೆದರ್ಲ್ಯಾಂಡ್ ವಿರುದ್ಧ ಇಂಗ್ಲೆಂಡ್ ಪಂದ್ಯಕ್ಕಾಗಿ ಮೈಕೆಲ್ ವಾನ್ ಪುಣೆಗೆ ಪ್ರಯಾಣ ಬೆಳೆಸಿದ್ದಾರೆ .
ತಮ್ಮ ಇತ್ತೀಚಿನ ಟ್ವಿಟರ್ ಅಥವಾ ಈಗಿನ ಎಕ್ಸ್ ಖಾತೆಯಲ್ಲಿ ಮೈಕೆಲ್ ಮುಂಬೈ ಮೇಲೆ ತಮಗಿರುವ ವಿಶೇಷ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಈ ನಗರದಲ್ಲಿ ಅವರು ಕ್ರಿಕೆಟ್ ಬಗ್ಗೆ ಇರುವ ಅತಿಯಾದ ಉತ್ಸಾಹವನ್ನು ಮೆಚ್ಚಿಕೊಂಡಿದ್ದಾರೆ. ಮುಂಬೈನಲ್ಲಿ ನಡೆದ ಗಲ್ಲಿ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ಇಲ್ಲಿನ ಜನರಿಗೆ ಇರುವ ಕ್ರಿಕೆಟ್ ಕ್ರೇಜ್ ಬಗ್ಗೆ ಹಾಗೂ ಇಲ್ಲಿನ ಸ್ಥಳೀಯ ಕ್ರಿಕೆಟ್ ಪ್ರತಿಭೆಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.
ವಾನ್ ತಮ್ಮ ಅಭಿಮಾನಿಗಳಿಗೆ ದೀಪಾವಳಿಯ ಶುಭಾಶಯ ಕೋರಿದ್ದಾರೆ. ನಾನು ಮುಂಬೈಯನ್ನು ಏಕೆ ತುಂಬಾ ಪ್ರೀತಿಸುತ್ತೇನೆ ಎಂದರೆ ಇಲ್ಲಿನ ಜನರ ಜೀವನ ಹಾಗೂ ಇವರಿಗೆ ಕ್ರಿಕೆಟ್ ಮೇಲಿರುವ ಉತ್ಸಾಹವಾಗಿದೆ.ಇಲ್ಲಿನ ಜನರು ಕ್ರಿಕೆಟ್ ಬಗ್ಗೆ ತುಂಬಾ ಸಂತೋಷ ಹಾಗೂ ತೃಪ್ತಿಯನ್ನು ಹೊಂದಿದ್ದಾರೆ. ಭಾರತದ ಪ್ರತಿಯೊಬ್ಬರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
People always ask me why I love #Mumbai so much .. this is why .. the passion for life & more so cricket is so infectious .. the people all seem so happy & content .. Serious players on show btw .. #India Happy Diwali everyone x pic.twitter.com/G7rfXoVYJK
— Michael Vaughan (@MichaelVaughan) November 11, 2023


