HomeBusinessದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನ ಖರೀದಿಸುತ್ತಿದ್ದೀರೇ.....? ಈ ಅಂಶಗಳು ನಿಮ್ಮ ಗಮನದಲ್ಲಿರಲಿ

ದೀಪಾವಳಿ ಹಬ್ಬದ ಪ್ರಯುಕ್ತ ಚಿನ್ನ ಖರೀದಿಸುತ್ತಿದ್ದೀರೇ…..? ಈ ಅಂಶಗಳು ನಿಮ್ಮ ಗಮನದಲ್ಲಿರಲಿ

ದೀಪಾವಳಿಗೂ ಸ್ವಲ್ಪ ದಿನಗಳ ಮುನ್ನ ಉತ್ತರ ಭಾರತ ಭಾಗಗಳಲ್ಲಿ ಧನ್ತೇರಸ್​ ಹಬ್ಬವನ್ನು ಜೋರಾಗಿ ಆಚರಿಸಲಾಗುತ್ತದೆ. ಇದು ದೀಪಾವಳಿ ಹಬ್ಬ ಹತ್ತಿರ ಬಂದಿದೆ ಎನ್ನುವುದರ ಸಂಕೇತವೂ ಹೌದು ಜೊತೆಯಲ್ಲಿ ಈ ಹಬ್ಬವು ಮನೆಗೆ ಸಮೃದ್ಧಿಯನ್ನು ಹೊತ್ತು ತರುತ್ತೆ ಎಂದೂ ಸಹ ಹೇಳಲಾಗುತ್ತದೆ. ಈ ದಿನದಂದು ಚಿನ್ನ, ಬೆಳ್ಖಿ ಅಥವಾ ಅಮೂಲ್ಯವಾದ ಲೋಹಗಳ ಖರೀದಿ ಮಾಡುವುದು ಅತ್ಯಂತ ಶುಭಕರ ಎಂಬ ನಂಬಿಕೆ ಕೂಡ ಇದೆ.

ಈ ವರ್ಷ ನವೆಂಬರ್​ 10 ಶುಕ್ರವಾರದಂದು ಧನ್ತೇರಸ್​ ಹಬ್ಬ ಬಂದಿದೆ. ಹೀಗಾಗಿ ನಾಳೆ ಯಾರಾದರೂ ಚಿನ್ನ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ನಿಮಗಾಗಿ ಕೆಲವೊಂದು ಮಹತ್ವದ ಟಿಪ್ಸ್​ ಇಲ್ಲಿದೆ ನೋಡಿ :

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿನ್ನದಲ್ಲಿ ಹೂಡಿಕೆ ಮಾಡುವುದು ಒಂದು ರೀತಿಯಲ್ಲಿ ನಿಮ್ಮ ಉಳಿತಾಯವನ್ನು ಹೂಡಿಕೆ ಮಾಡುವ ಸ್ಮಾರ್ಟ್ ವಿಧಾನ ಕೂಡ ಹೌದು. ಚಿನ್ನವು ಕಾಲ ಕಳೆದಂತೆ ಹೆಚ್ಚು ಮೌಲ್ಯವನ್ನು ಹೊಂದುವುದರಿಂದ ಖಂಡಿತವಾಗಿಯೂ ಚಿನ್ನದ ಮೇಲೆ ಮಾಡಿದ ಹೂಡಿಕೆ ಎಂದಿಗೂ ನಷ್ಟವನ್ನುಂಟು ಮಾಡೋದಿಲ್ಲ.

ಬಜೆಟ್​ ಪ್ಲಾನಿಂಗ್​ : ಚಿನ್ನ ಖರೀದಿ ಮಾಡುವ ಮುನ್ನ ನೀವು ನಿಮ್ಮ ಹಣಕಾಸಿನ ವ್ಯವಸ್ಥೆಗೆ ಯಾವುದೇ ತೊಂದರೆಯಾಗದಂತೆ ಪ್ಲಾನಿಂಗ್​ ಮಾಡಬೇಕು. ಸಾಲ ಮಾಡಿ ಚಿನ್ನ ಖರೀದಿ ಮಾಡುವುದು ಒಳ್ಳೆಯ ಲಕ್ಷಣವಲ್ಲ. ನಿಮ್ಮ ಖರ್ಚಿಗೂ ಯಾವುದೇ ತೊಂದರೆ ಆಗದಂತೆ ನೀವು ಬಜೆಟ್​ ಪ್ಲಾನ್​ ಮಾಡಿಕೊಳ್ಳಬೇಕು.

ಚಿನ್ನದ ಶುದ್ಧತೆ : ಚಿನ್ನದ ಆಭರಣಗಳು ವಿವಿಧ ಶುದ್ಧತೆಯ ಹಂತಗಳನ್ನ ಒಳಗೊಂಡಿರುತ್ತದೆ. ಸಾಮಾನ್ಯವಾಗಿ ಚಿನ್ನದ ಶುದ್ಧತೆಯನ್ನು ಕ್ಯಾರಟ್​ನಲ್ಲಿ ಅಳೆಯಲಾಗುತ್ತದೆ. 24 ಕ್ಯಾರಟ್​ ಚಿನ್ನ ಅತ್ಯಂತ ಶುದ್ಧ ಚಿನ್ನವಾಗಿದ್ದರೂ ಸಹ ಇದು ಅತ್ಯಂತ ಮೃದುವಾಗಿರೋದ್ರಿಂದ ಆಭರಣ ತಯಾರಿಸಲು ಯೋಗ್ಯವಲ್ಲ. ಹೀಗಾಗಿ 22, 18 ಹಾಗೂ 14 ಕ್ಯಾರಟ್​ ಚಿನ್ನದ ಆಭರಣಗಳು ಮಾತ್ರ ಲಭ್ಯವಿರುತ್ತದೆ. ಆದಷ್ಟು 22 ಕ್ಯಾರಟ್​ ಚಿನ್ನದ ಮೇಲೆಯೇ ಹಣ ವಿನಿಯೋಗಿಸಿ. ಹಾಗೂ ಹಾಲ್​ಮಾರ್ಕ್​ ಇರುವ ಚಿನ್ನವನ್ನೆ ಖರೀದಿ ಮಾಡಿ.

ಪ್ರತಿಷ್ಠಿತ ಮಳಿಗೆಗಳಿಂದಲೇ ಚಿನ್ನ ಖರೀದಿಸಿ : ಚಿನ್ನ ಖರೀದಿ ಮಾಡುವಾಗ ಪ್ರತಿಷ್ಠಿತ ಮಳಿಗೆಗಳಿಂದಲೇ ಖರೀದಿ ಮಾಡುವುದು ಉತ್ತಮ. ಈ ಬಗ್ಗೆ ನಿಮ್ಮ ಕುಟುಂಬಸ್ಥರು ಹಾಗೂ ಸ್ನೇಹಿತರಿಂದ ಸಲಹೆ ಪಡೆದುಕೊಳ್ಳಿ;. ಪಾರದರ್ಶಕ ಬೆಲೆಗಾಗಿ ಹಾಗೂ ಗುಣಮಟ್ಟದ ಚಿನ್ನಕ್ಕಾಗಿ ಪ್ರತಿಷ್ಠಿತ ಮಳಿಗೆಗಳೇ ಒಳ್ಳೆಯ ಆಯ್ಕೆಯಾಗಿದೆ.

ಹಾಲ್ಮಾರ್ಕ್ ಪ್ರಮಾಣೀಕರಣ: ಚಿನ್ನದ ಆಭರಣಗಳ ಮೇಲೆ ಯಾವಾಗಲೂ ಹಾಲ್‌ಮಾರ್ಕ್ ಪ್ರಮಾಣೀಕರಣವನ್ನು ನೋಡಿ. ಇದು ಚಿನ್ನದ ಶುದ್ಧತೆ ಮತ್ತು ದೃಢೀಕರಣವನ್ನು ಸೂಚಿಸುತ್ತದೆ. ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS) ಭಾರತದಲ್ಲಿ ಚಿನ್ನವನ್ನು ಪ್ರಮಾಣೀಕರಿಸುತ್ತದೆ. ನೀವು ಪಾವತಿಸುತ್ತಿರುವ ಗುಣಮಟ್ಟವನ್ನು ನೀವು ಪಡೆಯುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳಲು ಈ ಪ್ರಮಾಣೀಕರಣವು ನಿರ್ಣಾಯಕವಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular