ನಗರದಲ್ಲಿ ನೀವು ವಾಸಿಸುತ್ತಿದ್ದರೆ ಓಲಾ, ಉಬರ್ ಮುಂತಾದ ಕ್ಯಾಬ್ ಗಳಲ್ಲಿ ಆಗಾಗ ಓಡಾಡುತ್ತಿರುತ್ತೀರ. ಕೆಲವೊಮ್ಮೆ ಕ್ಯಾಬ್ ಬುಕ್ ಮಾಡುವಾಗ ಏನಾದರೊಂದು ಕಾರಣವೊಡ್ಡಿ ಚಾಲಕರು ರದ್ದು ಮಾಡಿರುವಂಥ ಘಟನೆಗಳು ನಡೆಯುತ್ತದೆ. ಇದೇ ರೀತಿ ಇಲ್ಲೊಬ್ಬ ಉಬರ್ ಚಾಲಕ, ಪ್ರಯಾಣಿಕರಿಗೆ ತನ್ನ ಚಾಲನೆಯನ್ನು ರದ್ದುಗೊಳಿಸುವ ಮೂಲಕ 23 ಲಕ್ಷ ರೂ. ಪಡೆದಿದ್ದಾನೆ.
ಹೌದು, ಅಮೆರಿಕಾದ ಉತ್ತರ ಕೆರೊಲಿನಾದ 70 ವರ್ಷದ ಉಬರ್ ಚಾಲಕ ಒಂದು ವರ್ಷದಲ್ಲಿ ತನ್ನ ಶೇ.30 ಕ್ಕಿಂತ ಹೆಚ್ಚು ಪ್ರವಾಸಗಳನ್ನು ರದ್ದುಗೊಳಿಸುವ ಮೂಲಕ 23 ಲಕ್ಷ ರೂ. (ಅಂದಾಜು ಡಾಲರ್ 28,000) ಗಳಿಸಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ಬಿಲ್ ಎಂದು ಹೆಸರಿಸಿಕೊಂಡಿರುವ ಉಬರ್ ಚಾಲಕ, ತಾನು ಶೇಕಡಾ 10ಕ್ಕಿಂತ ಕಡಿಮೆ ರೈಡ್ ವಿನಂತಿಗಳನ್ನು ಸ್ವೀಕರಿಸಿದ್ದೇನೆ. 2022 ರಲ್ಲಿ ಸರಿಸುಮಾರು 1,500 ಟ್ರಿಪ್‌ಗಳನ್ನು ಕೈಗೊಂಡಿದ್ದೇನೆ ಎಂದು ಹಂಚಿಕೊಂಡಿದ್ದಾರೆ. ಯೋಗ್ಯ ಮತ್ತು ಲಾಭದಾಯಕವೆಂದು ಭಾವಿಸುವ ಸವಾರಿಗಳನ್ನು ಮಾತ್ರ ತೆಗೆದುಕೊಳ್ಳುವುದಾಗಿ ಬಿಲ್ ಹೇಳಿದ್ದಾರೆ.
ಅದರಲ್ಲೂ ಬಿಲ್ ಅವರು ಬಹಳ ತಂತ್ರಗಳನ್ನು ಮಾಡುತ್ತಾರೆ. ಶುಕ್ರವಾರ ಮತ್ತು ಶನಿವಾರದಂದು ರಾತ್ರಿ 10 ಗಂಟೆಯ ನಡುವೆ ಜನದಟ್ಟಣೆಯ ಸಮಯದಲ್ಲಿ ಅವರು ವಿಮಾನ ನಿಲ್ದಾಣಗಳು ಮತ್ತು ಬಾರ್‌ಗಳಂತಹ ಸ್ಥಳಗಳತ್ತ ಹೋಗಿ ಅಲ್ಲಿಂದಲೇ ರೈಡ್ ಪಡೆಯುತ್ತಾರೆ. ಮಧ್ಯರಾತ್ರಿ 2.30ರ ವರೆಗೂ ಕೆಲಸ ಮಾಡುವುದರಿಂದ ಹೆಚ್ಚಿನ ಹಣ ಸಿಗುತ್ತದೆ. ಅಲ್ಲದೆ, ವಿಮಾನ ನಿಲ್ದಾಣಗಳಲ್ಲಿ ಬೆಲೆ ತೀವ್ರವಾಗಿ ಜಿಗಿಯುತ್ತದೆ. 20 ನಿಮಿಷದ ಪ್ರಯಾಣವು ಡಾಲರ್ 10, ಡಾಲರ್ 20 ರಿಂದ ಡಾಲರ್ 40 ಮತ್ತು ಕೆಲವೊಮ್ಮೆ ಡಾಲರ್ 50ಕ್ಕೆ ಹೋಗುತ್ತದೆ.
ಅಲ್ಲದೆ, ದೂರದ ಊರಿಗೆ ಸವಾರಿ ಮಾಡಲು ಬಿಲ್ ಇಷ್ಟಪಡುವುದಿಲ್ಲ. ಒಂದೊಮ್ಮೆ ನಗರದಿಂದ ಎರಡು ಗಂಟೆಗಳ ದೂರದಲ್ಲಿರುವ ಗ್ರಾಮೀಣ ಪ್ರದೇಶಕ್ಕೆ ಉಬರ್ ಚಾಲನೆ ಮಾಡಿಕೊಂಡು ಹೋಗಿದ್ದರು. ಆದರೆ, ಹಿಂತಿರುಗಿ ಬರುವಾಗ ಗ್ರಾಹಕರು ಸಿಗದೇ ಇರುವುದರಿಂದ ಅವರಿಗೆ ನಷ್ಟವುಂಟಾಯಿತು. ಹೀಗಾಗಿ ಅವರು ಗ್ರಾಮೀಣ ಪ್ರದೇಶದತ್ತ ಸವಾರಿಗೆ ಒಪ್ಪುವುದಿಲ್ಲ.
ಅಂದಹಾಗೆ, ಬಿಲ್ ರದ್ದು ಮಾಡಿರುವ ತಮ್ಮ ಚಾಲನೆಯು, ಉಬರ್ ಶಿಫಾರಸು ಮಾಡಿದ ಶೇ.10 ಮಿತಿಗಿಂತ ಗಮನಾರ್ಹವಾಗಿ ಹೆಚ್ಚಾಗಿದೆ. ರದ್ದತಿ ದರವನ್ನು ಮೀರಿದ ಚಾಲಕರು ಕಂಪನಿಯ ರಿವಾರ್ಡ್ ಪ್ರೋಗ್ರಾಂಗೆ ಪ್ರವೇಶವನ್ನು ಕಳೆದುಕೊಳ್ಳುವ ಅಪಾಯವಿದೆ.
ಉಬರ್ ಪ್ರಕಾರ, ಚಾಲಕನ ಗಮ್ಯಸ್ಥಾನದ ಕಾರಣದಿಂದಾಗಿ ಪ್ರವಾಸವನ್ನು ನಿರಾಕರಿಸುವುದು ಅಥವಾ ರದ್ದುಗೊಳಿಸುವುದು ಚಾಲಕನು ಖಾತೆಯ ಪ್ರವೇಶವನ್ನು ಕಳೆದುಕೊಳ್ಳುವಲ್ಲಿ ಕಾರಣವಾಗಬಹುದು. ಆದರೆ, ಬಿಲ್ ರೇಟಿಂಗ್‌ಗಳ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುವುದಿಲ್ಲವಂತೆ. ಅವರು ತನ್ನನ್ನು ತಾನು ಆನಂದಿಸಲು ಮತ್ತು ಸ್ವಲ್ಪ ಹಣವನ್ನು ಗಳಿಸಲು ಬಯಸುತ್ತೇನೆ ಅಷ್ಟೇ ಎಂದು ಹೇಳಿದ್ದಾರೆ.