
ಬುರ್ಜ್ಖಲೀಫಾದ 154ನೇ ಮಹಡಿಯಲ್ಲಿ ನಿಯಾ ಶರ್ಮಾ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಗಳಿಗೆ ನಿಯಾ ಶರ್ಮಾ ಏನೂ ಇಲ್ಲ….. ಸುಮ್ಮನೇ ಚಿಲ್ ಮಾಡುತ್ತಿದ್ದೆ ಎಂದು ಶೀರ್ಷಿಕೆ ನೀಡಿದ್ದಾರೆ. ಇದರ ಜೊತೆಯಲ್ಲಿ ದುಬೈನ ಬೀದಿಯಲ್ಲಿ ಬರಿಗಾಲಿನಲ್ಲಿ ನಿಂತು ಕೂಡ ನಿಯಾ ಶರ್ಮಾ ಫೋಟೋಶೂಟ್ ಮಾಡಿಸಿದ್ದಾರೆ.
ನಿಯಾ ಶರ್ಮಾ 2010ರಲ್ಲಿ ಕಾಳಿ ಏಕ್ ಅಗ್ನಿಪರೀಕ್ಷಾ ಮೂಲಕ ಸಣ್ಣ ಪರದೆಗೆ ಎಂಟ್ರಿ ಪಡೆದಿದ್ದರು. ಏಕ್ ಹಜಾರೋನ್ ಮೇ ಮೇರಿ ಬೆಹನಾ ಹೈ ಮುಂತಾ ಶೋಗಳು ಅವರಿಗೆ ಹೆಸರು ತಂದುಕೊಟ್ಟಿದ್ದಾವೆ. ರವಿ ದೂಬೆ ಜೊತೆಯಲ್ಲಿ ಜಮಾಯ್ ರಾಜಾ ಧಾರವಾಹಿಯಲ್ಲಿ ಕೂಡ ಮುಖ್ಯಪಾತ್ರದಲ್ಲಿ ನಿಯಾ ಶರ್ಮಾ ಕಾಣಿಸಿಕೊಂಡಿದ್ದರು. ಈ ಧಾರವಾಹಿ ನಿಯಾಶರ್ಮಾರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು.
ಕಳೆದ ತಿಂಗಳಲ್ಲಿ ನಿಯಾ ಶರ್ಮಾ ಸೋಶಿಯಲ್ ಮೀಡಿಯಾದಲ್ಲಿ ತಮ್ಮ 13 ವರ್ಷದ ವೃತ್ತಿ ಜೀವನವನ್ನು ಸ್ಮರಿಸಿದ್ದರು. ಟೆಲಿವಿಷನ್ ಜಗತ್ತಿನಲ್ಲಿ 13 ಅದ್ಭುತ ವರ್ಷಗಳನ್ನು ಕಳೆದಿದ್ದೇನೆ ಎಂದು ನಿಯಾ ಶರ್ಮಾ ಹೇಳಿಕೊಂಡಿದ್ದರು.


