ನವದೆಹಲಿ: ಈರುಳ್ಳಿ ಬೆಲೆ ದಿನೇ ದಿನೇ ತೀವ್ರ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.
ಈ ವರ್ಷದ ಡಿಸೆಂಬರ್ 31ರವರೆಗೆ ಈರುಳ್ಳಿಗೆ ಪ್ರತಿ ಟನ್ ನಗೆ 66,730 ರೂ. ಕನಿಷ್ಠ ರಫ್ತು ದರ ನಿಗದಿಪಡಿಸಲಾಗಿದೆ. ಇದುವರೆಗೆ ಈರುಳ್ಳಿ ರಫ್ತು ಉಚಿತವಾಗಿತ್ತು. ಬೆಲೆ ನಿಯಂತ್ರಣ ಉದ್ದೇಶದಿಂದ ಸರ್ಕಾರ 2023ರ ಡಿಸೆಂಬರ್ 31ರವರೆಗೆ ಪ್ರತಿ ಟನ್ ಈರುಳ್ಳಿ ರಫ್ತು ಮೇಲೆ 800 ಅಮೆರಿಕನ್ ಡಾಲರ್ ಕನಿಷ್ಠ ರಫ್ತು ಮೊತ್ತ ವಿಧಿಸಿದೆ ಎಂದು ವಿದೇಶಿ ವ್ಯಾಪಾರ ಮಹಾನ್ ನಿರ್ದೇಶನಾಲಯ ತಿಳಿಸಿದೆ.
ದೆಹಲಿ ಸೇರಿ ವಿವಿಧೆಡೆ ಶನಿವಾರ ಈರುಳ್ಳಿ ದರ 65 – 80 ರೂ.ವರೆಗೆ ಇತ್ತು. ದೀಪಾವಳಿ ವೇಳೆಗೆ ಈರುಳ್ಳಿ ದರ 100 ರೂಪಾಯಿ ತಲುಪಬಹುದು ಎಂದು ಹೇಳಲಾಗಿದೆ.