HomeEntertainment'ಉಪಾಧ್ಯಕ್ಷ' ಚಿತ್ರದ ಲಿರಿಕಲ್ ಸಾಂಗ್ ನವೆಂಬರ್‌ 1 ರಂದು ರಿಲೀಸ್

‘ಉಪಾಧ್ಯಕ್ಷ’ ಚಿತ್ರದ ಲಿರಿಕಲ್ ಸಾಂಗ್ ನವೆಂಬರ್‌ 1 ರಂದು ರಿಲೀಸ್

ಅನಿಲ್ ಕುಮಾರ್ ನಿರ್ದೇಶನದ ಚಿಕ್ಕಣ್ಣ ಅಭಿನಯದ ಬಹು ನಿರೀಕ್ಷಿತ ‘ಉಪಾಧ್ಯಕ್ಷ’ ಚಿತ್ರದ ಟೀಸರ್ ಯಶಸ್ಸಿನ  ಬೆನ್ನಲ್ಲೇ ಇದೀಗ  ಲಿರಿಕಲ್ ಹಾಡೊಂದನ್ನು ಮುಂದಿನ ತಿಂಗಳು ನವೆಂಬರ್ 1ರಂದು ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಈ ಹಾಡನ್ನು ವೀಕ್ಷಿಸಬಹುದಾಗಿದೆ.

ಡಿ ಏನ್ ಸಿನಿಮಾಸ್ ಬ್ಯಾನರ್ ನಡಿ ಸ್ಮಿತಾ ಉಮಾಪತಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ. ಚಿಕ್ಕಣ್ಣ ಮತ್ತು ಮಲೈಕಾ ಸೇರಿದಂತೆ ರವಿಶಂಕರ್‌, ಸಾಧುಕೋಕಿಲ ತೆರೆ ಹಂಚಿಕೊಂಡಿದ್ದಾರೆ. ಶಂಕರ್ ಚಂದ್ರ ಛಾಯಾಗ್ರಹಣವಿದ್ದು, ಕೆ ಎಂ ಪ್ರಕಾಶ್ ಸಂಕಲನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular