HomeIndiaBIG NEWS: ಮತ್ತೊಂದು ಭೀಕರ ಅಪಘಾತ; ವಾಯುಪಡೆ ಅಧಿಕಾರಿ ಪತ್ನಿ ಸ್ಥಳದಲ್ಲೇ ದುರ್ಮರಣ

BIG NEWS: ಮತ್ತೊಂದು ಭೀಕರ ಅಪಘಾತ; ವಾಯುಪಡೆ ಅಧಿಕಾರಿ ಪತ್ನಿ ಸ್ಥಳದಲ್ಲೇ ದುರ್ಮರಣ

ಮಥುರಾ: ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ವಾಯುಪಡೆ ಅಧಿಕಾರಿಯೊಬ್ಬರ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮಠುರಾದ ಸುರಿರ್ ಕೊತ್ವಾಲಿ ಪ್ರದೇಶದ ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ ಮಹಿಳೆ ಮೂತ್ರ ವಿಸರ್ಜನೆಗೆಂದು ಕಾರಿನಿಂದ ಇಳಿದಿದ್ದಾರೆ. ಈ ವೇಳೆ ವೇಗವಾಗಿ ಬಂದ ಮತ್ತೊಂದು ಕಾರು ಮಹಿಳೆಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಮಹಿಳೆ ನೌಝಿಲ್-ರಾಯ ರಸ್ತೆಯ ತೆಹ್ರಾ ಬಳಿಯ ಅಂಡರ್ ಪಾಸ್ ಸೇತುವೆಯಿಂದ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನೆಯಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಮೃತ ಮಹಿಳೆಯನ್ನು ಕಿಸ್ಲಾಯಾ (40)ಎಂದು ಗುರುತಿಸಲಾಗಿದೆ. ವಾಯುಪಡೆಯಲ್ಲಿ ಜೂನಿಯರ್ ವಾರಂಟೆ ಅಧಿಕಾರಿಯಾಗಿರುವ ದೇವಿಪ್ರಸಾದ್ ಮಿಶ್ರಾ ಅವರ ಪತ್ನಿ ಎಂದು ತಿಳಿದುಬಂದಿದೆ. ದೆಹಲಿಯಿಂದ ಆಗ್ರಾಕ್ಕೆ ತೆರಳುತ್ತಿದ್ದಾಗೆ ಈ ದುರಂತ ಸಂಭವಿಸಿದೆ.

 

For Latest News Updates, Join Our Whatsapp Community🚩
RELATED ARTICLES

Most Popular