HomeAgricultureರೈತ ಸಮುದಾಯಕ್ಕೆ `RBI’ ಗುಡ್ ನ್ಯೂಸ್ : ಕೃಷಿ ಸಂಬಂಧಿತ ಇತರ ಚಟುವಟಿಕೆಗೂ ಬಡ್ಡಿ ಸಹಾಯಧನ

ರೈತ ಸಮುದಾಯಕ್ಕೆ `RBI’ ಗುಡ್ ನ್ಯೂಸ್ : ಕೃಷಿ ಸಂಬಂಧಿತ ಇತರ ಚಟುವಟಿಕೆಗೂ ಬಡ್ಡಿ ಸಹಾಯಧನ

ಬೆಂಗಳುರು : ರೈತ ಸಮುದಾಯಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸಿಹಿಸುದ್ದಿ ನೀಡಿದ್ದು, ರೈತರ ಬಡ್ಡಿ ಸಹಾಯಧನದ ಬೆಳೆಸಾಲ ಯೋಜನೆಯನ್ನು ಕೃಷಿ ಸಂಬಂಧಿತ ಇತರ ಚಟುವಟಿಕೆಗಳಿಗೂ ವಿಸ್ತರಣೆ ಮಾಡಿದೆ.

ಆರ್ ಬಿಐ ಹೊಸ ಮಾರ್ಗಸೂಚಿ ಪ್ರಕಾರ, ಬೆಳೆ ಸಾಲ ಯೋಜನೆಯನ್ನು ಕೃಷಿ ಸಂಬಂಧಿತ ಇತರ ಚಟುವಟಿಕೆಗಳಿಗೂ ವಿಸ್ತರಣೆ ಮಾಡಿದ್ದು, ಪಶುಸಂಗೋಪನೆ, ಹೈನುಗಾರಿಕೆ, ಮೀನುಗಾರಿಕೆ, ಕೋಳಿ, ಕುರಿ, ಜೇನು ಸಾಕಾಣಿಕೆ ಚಟುವಟಿಕೆಗಳಿಗೆ ಬಡ್ಡಿ ಸಹಾಯಧನ ಸಿಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಲ್ಪಾವಧಿ ಬೆಳೆ ಸಾಲ ಪಡೆದ ರೈತರು ನಿಗದಿತ ಕಾಲಮಿತಿಯೊಳಗೆ ಮರುಪಾವತಿಸಿದ್ರೆ ಶೇ. 3 ರಷ್ಟು ಬಡ್ಡಿ ರಿಯಾಯಿತಿ ದೊರೆಯುತ್ತದೆ. ಅಂದರೆ ಶೇ 4 ರ ಬಡ್ಡಿ ದರದಲ್ಲಿ ಗರಿಷ್ಟ 3 ಲಕ್ಷ ರೂ.ಗಳ ತನಕ ಬಡ್ಡಿ ಸಹಾಯಧನ ಸಾಲ ಪಡೆಯಬಹುದಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular