HomeKarnatakaMysore Dasara : ದಸರೆಯ ಪ್ರಮುಖ ಆಕರ್ಷಣೆ ವಜ್ರ ಮುಷ್ಟಿ ಕಾಳಗ : ಪ್ರದೀಪ್ ಜೆಟ್ಟಿ...

Mysore Dasara : ದಸರೆಯ ಪ್ರಮುಖ ಆಕರ್ಷಣೆ ವಜ್ರ ಮುಷ್ಟಿ ಕಾಳಗ : ಪ್ರದೀಪ್ ಜೆಟ್ಟಿ ತಲೆಯಿಂದ ಚಿಮ್ಮಿದ ರಕ್ತ

ಮೈಸೂರು : ಮೈಸೂರು ದಸರೆಯ ಪ್ರಮುಖ ಆಕರ್ಷಣೆ ವಜ್ರ ಮುಷ್ಟಿ ಕಾಳಗ ನಡೆದಿದ್ದು, ಪ್ರದೀಪ್ ಜೆಟ್ಟಿ ತಲೆಯಿಂದ ರಕ್ತ ಚಿಮ್ಮಿದೆ.

ಹೌದು, ವಿಜಯ ದಶಮಿ ಹಿನ್ನೆಲೆಯಲ್ಲಿ ಅರಮನೆಯ ಶ್ವೇತ ವರಹ ದೇವಸ್ಥಾನದಲ್ಲಿ ವಜ್ರ ಮುಷ್ಟಿ ಕಾಳಗ ನಡೆದಿದ್ದು, ಕಾಳಗದಲ್ಲಿ ಬೆಂಗಳೂರಿನ ಪ್ರಮೋದ್ ಜೆಟ್ಟಿಯಿಂದ ಚಾಮರಾಜನಗರದ ವೆಂಕಟೇಶ್ ಜೆಟ್ಟಿಗೆ ಪ್ರಹಾರ ಮಾಡಲಾಯಿತು. ಚನ್ನಪಟ್ಟಣದ ಪ್ರವೀಣ್ ಜೆಟ್ಟಿಯಿಂದ ಮೈಸೂರು ಪ್ರದೀಪ್ ಜೆಟ್ಟಿಗೆ ಪ್ರಹಾರ ಮಾಡಿದ್ದು, ತಲೆಯಿಂದ ರಕ್ತ ಚಿಮ್ಮಿದೆ.

ಕಾಳಗಕ್ಕೆ ಸಿದ್ಧಪಡಿಸಲಾದ ಅಖಾಡದಲ್ಲಿ ನಡೆದ ರೋಚಕ ಕಾಳಗ ನೋಡುಗರಲ್ಲಿ ಕುತೂಹಲ ಮೂಡಿಸಿತ್ತು. ರಾಜವಂಶಸ್ಥರ ಸಮ್ಮುಖದಲ್ಲಿ ನಡೆದ ಕಾಳಗದಲ್ಲಿ ಈಗಾಗಲೇ ಅಭ್ಯಾಸ ಮಾಡಿ ಬಂದಿದ್ದ ಜಟ್ಟಿಗಳು ಪರಸ್ಪರ ಕಾಳಗಕ್ಕಿಳಿದರು.ಜಟ್ಟಿಗಳ ರಕ್ತ ಸಮರ್ಪಣೆ ಮುಖಾಂತರ ನಾಡಹಬ್ಬ ದಸರಾ ಮಹೋತ್ಸವ ಹಾಗೂ ಧಾರ್ಮಿಕ ವಿಧಿ ವಿಧಾನಗಳಿಗೆ ಸಾಂಪ್ರದಾಯಿಕ ಚಾಲನೆ ದೊರೆಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಗ್ರಹ ಚಿತ್ರ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular