HomeKarnatakaBIG NEWS: ಕೌಟುಂಬಿಕ ಕಲಹಕ್ಕೆ ಪತ್ನಿಯನ್ನೇ ಕೊಂದ ಪತಿ; ಅನಾಥರಾದ ಇಬ್ಬರು ಮಕ್ಕಳು

BIG NEWS: ಕೌಟುಂಬಿಕ ಕಲಹಕ್ಕೆ ಪತ್ನಿಯನ್ನೇ ಕೊಂದ ಪತಿ; ಅನಾಥರಾದ ಇಬ್ಬರು ಮಕ್ಕಳು

ಕಾರವಾರ: ಪತಿ ಹಾಗೂ ಪತ್ನಿ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, ಇಬ್ಬರು ಮಕ್ಕಳು ಅನಾಥರಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನಡೆದಿದೆ.

ಗಂಡ-ಹೆಂಡತಿ ನಡುವಿನ ಜಗಳಕ್ಕೆ ಕೋಪಗೊಂಡ ಪತಿ ಪತ್ನಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿದ್ದಾನೆ. 30 ವರ್ಷದ ನಂದಿನಿ ಕೊಲೆಯಾದ ಮಹಿಳೆ. ನಂದಿನಿ ಹಾಗೂ ಲೋಕೇಶ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಓರ್ವ ಮಗ ಹಗೂ ಓರ್ವ ಮಗಳು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಬ್ಬತ್ತಿ ಕ್ರಾಸ್ ನಲ್ಲಿರುವ ಮನೆಯಲ್ಲಿ ವಸವಾಗಿದ್ದ ದಂಪತಿ ನಡುವೆ ಏಕಾಏಕಿ ಜಗಳ ಆರಂಭವಾಗಿದೆ. ಈ ವೇಳೆ ಲೋಕೇಶ್ ಮಾರಕಾಸ್ತ್ರಗಳಿಂದ ಪತ್ನಿಯ ಕತ್ತನ್ನೇ ಸೀಳಿ ಅಟ್ಟಹಾಸಮೆರೆದಿದ್ದಾನೆ. ರಕ್ತಸಿಕ್ತಳಾದರೂ ತಪ್ಪಿಸಿಕೊಳ್ಳಲು ಮನೆಯಿಂದ ಹೊರಗೋಡಿ ಬಂದ ಮಹಿಳೆ ಕುಸಿದು ಬಿದ್ದಿದ್ದಾಳೆ. ತೀವ್ರರಕ್ತಶ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಘಟನೆ ನೋಡಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ಪತಿ ಮಹಾಶಯ ಎಸ್ಕೇಪ್ ಆಗಿದ್ದ, ಸ್ಥಳಕ್ಕೆ ಬಂದು ಘಟನೆ ಪರಿಶೀಲಿಸಿದ ಪೊಲೀಸರು ಭಟ್ಕಳ ಹೋಟೆಲ್ ಒಂದರಲ್ಲಿ ಆರೋಪಿ ಲೋಕೇಶ್ ನನ್ನು ಬಂಧಿಸಿದ್ದಾರೆ. ಮುರುಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಅಪ್ಪನಿಂದಲೇ ಕೊಲೆಯಾದ ಅಮ್ಮ, ಅತ್ತ ಕೊಲೆ ಆರೋಪಿಯಾಗಿ ಜೈಲು ಪಾಲಾದ ಅಪ್ಪ, ಇಬ್ಬರು ಪುಟ್ಟ ಮಕ್ಕಳು ಅನಾಥರಾಗಿದ್ದಾರೆ.

 

For Latest News Updates, Join Our Whatsapp Community🚩
RELATED ARTICLES

Most Popular