HomeEntertainmentಪೃಥ್ವಿರಾಜ್ ಸುಕುಮಾರನ್ ಹುಟ್ಟುಹಬ್ಬದಂದು ವಿಶೇಷ ಉಡುಗೊರೆ ನೀಡಿದ 'ಸಲಾರ್' ಚಿತ್ರ ತಂಡ

ಪೃಥ್ವಿರಾಜ್ ಸುಕುಮಾರನ್ ಹುಟ್ಟುಹಬ್ಬದಂದು ವಿಶೇಷ ಉಡುಗೊರೆ ನೀಡಿದ ‘ಸಲಾರ್’ ಚಿತ್ರ ತಂಡ

ಡಿಸೆಂಬರ್ 22ರಂದು ತೆರೆ ಕಾಣಲಿರುವ ಪ್ರಭಾಸ್ ನಟನೆಯ ‘ಸಲಾರ್’ ತನ್ನ ಟೀಸರ್ ಮೂಲಕವೇ ಈಗಾಗಲೇ ಹೊಸ ದಾಖಲೆ ಬರೆದಿದ್ದು, ಬಾಕ್ಸಾಫೀಸ್ ಧೂಳ್ ಎಬ್ಬಿಸಲು ಸಜ್ಜಾಗಿದೆ.

‘ಸಲಾರ್’ ಸಿನಿಮಾದಲ್ಲಿ ‘ವರ್ದರಾಜ ಮನ್ನಾರ್ʼ ಎಂಬ ಪಾತ್ರದಲ್ಲಿ ಪೃಥ್ವಿರಾಜ್ ಸುಕುಮಾರನ್  ಕಾಣಿಸಿಕೊಂಡಿದ್ದು, ಅವರ ಹುಟ್ಟುಹಬ್ಬದ ಪ್ರಯುಕ್ತ ಚಿತ್ರತಂಡ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆ ಮಾಡುವ ಮೂಲಕ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೃಥ್ವಿರಾಜ್ ಸುಕುಮಾರನ್ 41 ವಸಂತಕ್ಕೆ ಕಾಲಿಟ್ಟಿದ್ದಾರೆ. ಸಲಾರ್ ಚಿತ್ರದಲ್ಲಿ ರಾಜಾ ಮನ್ನಾರ್ ಪುತ್ರನಾಗಿ ಅಭಿನಯಿಸಿದ್ದಾರೆ.

ಈ ಚಿತ್ರದಲ್ಲಿ ಪ್ರಭಾಸ್ ಸೇರಿದಂತೆ ಪೃಥ್ವಿರಾಜ್ ಸುಕುಮಾರನ್, ಶೃತಿ ಹಾಸನ್, ಜಗಪತಿ ಬಾಬು, ರಾಮಚಂದ್ರ ರಾಜು, ಬ್ರಹ್ಮಜಿ, ನಾಗ ಮಹೇಶ್, ಮಧು ಗುರುಸ್ವಾಮಿ ಸೇರಿದಂತೆ ಹಲವರ ತಾರಾ ಬಳಗವಿದೆ. ಕನ್ನಡ ಚಿತ್ರರಂಗದ ದೊಡ್ಡ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲಂಸ್ ಬ್ಯಾನರ್ ನಡಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದು, ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಆಕ್ಷನ್ ಕಟ್ ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular