HomeKarnatakaBIG NEWS: ಕಿಲ್ಲರ್ 'BMTC' ಬಸ್ ಗೆ ಮತ್ತೊಂದು ಬಲಿ : ಇಂಜಿನಿಯರಿಂಗ್ ವಿದ್ಯಾರ್ಥಿ...

BIG NEWS: ಕಿಲ್ಲರ್ ‘BMTC’ ಬಸ್ ಗೆ ಮತ್ತೊಂದು ಬಲಿ : ಇಂಜಿನಿಯರಿಂಗ್ ವಿದ್ಯಾರ್ಥಿ ಸ್ಥಳದಲ್ಲೇ ಸಾವು

ಬೆಂಗಳೂರು: ಇಂದು ಮುಂಜಾನೆಯಿಂದಲೇ ಸಾಲು ಸಾಲು ಅಪಘಾತ ಪ್ರಕರಣಗಳು ನಡೆಯುತ್ತಿದ್ದು, ರಾಮನಗರಲ್ಲಿ ಲಾರಿ-ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಬಿ.ಎಂ.ಟಿ.ಸಿ ಬಸ್ ಗೆ ವಿದ್ಯಾರ್ಥಿಯೋರ್ವ ಬಲಿಯಾಗಿದ್ದಾನೆ.

ಬಿ.ಎಂ.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗಂಗಾಧರ್ ಮೃತ ವಿದ್ಯಾರ್ಥಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂಟರ್ನ್ ಶಿಪ್ ಸರ್ಟಿಫಿಕೇಟ್ ತರಲೆಂದು ವಿದ್ಯಾರ್ಥಿ ಗಂಗಾಧರ್ ಬೈಕ್ ನಲ್ಲಿ ಹೆಚ್ಎಎಲ್ ಗೆ ತೆರಳುತ್ತಿದ್ದ. ಈ ವೇಳೆ ಬಿ.ಎಂ.ಟಿ.ಸಿ ಬಸ್, ಬೈಕ್ ಗೆ ಡಿಕ್ಕಿಯಾಗಿದೆ. ವಿದ್ಯಾರ್ಥಿ ಗಂಗಾಧರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನಾ ಸ್ಥಳಕ್ಕೆ ಯಶವಂತಪುರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular