Video | ʼಅಲ್ಲಾʼ ಕುರಿತ ಹಾಡಿನ ಮೂಲಕ ಎಲ್ಲರ ಮನಗೆದ್ದ ಕರ್ನಾಟಕದ ಶಿವಭಕ್ತೆ

Indian Idol | Watch Shivani Swami's Soulful Musical Performance | Streaming On 7th Oct | Sony LIV - YouTube

ಹಿಂದಿ ಕಿರುತೆರೆಯಲ್ಲಿ ಪ್ರಸಾರವಾಗುವ ಸಂಗೀತ ಸ್ಪರ್ಧೆ ಕಾರ್ಯಕ್ರಮ ‘ಇಂಡಿಯನ್ ಐಡಲ್’ ನಲ್ಲಿ ಕರ್ನಾಟಕದ ಬೀದರ್‌ನ ಶಿವಾನಿ ಶಿವದಾಸ್ ಸ್ವಾಮಿ ಎಂಬ ಹದಿನೇಳು ವರ್ಷದ ಬಾಲಕಿ ಬಿರುಗಾಳಿ ಎಬ್ಬಿಸಿದ್ದಾರೆ.

ಸ್ಪರ್ಧೆ ಆಯ್ಕೆಯ ಕಾರ್ಯಕ್ರಮದಲ್ಲಿ ಆಕೆ ತನ್ನ ಪ್ರತಿಭೆಯನ್ನು ಮಾತ್ರವಲ್ಲದೆ ವಿಶಿಷ್ಟ ಶೈಲಿಯ ಗಾಯನವನ್ನೂ ಪ್ರದರ್ಶಿಸಿದ್ದಾರೆ.

ಶಿವಾನಿ, ಭಗವಾನ್ ಶಿವನ ಭಕ್ತೆ ಮತ್ತು ಅನುಯಾಯಿಯಾಗಿದ್ದು ತನ್ನ ಪ್ರದರ್ಶನದ ಸಮಯದಲ್ಲಿ ಬರಿಗಾಲಿನಲ್ಲಿ ಹಾಡಲು ನಿರ್ಧರಿಸಿದ್ದರು. ಇದು ತೀರ್ಪುಗಾರರನ್ನು ಆಶ್ಚರ್ಯಗೊಳಿಸಿದ್ದಲ್ಲದೇ ದೇವರ ಮೇಲೆ ಆಕೆಗಿರುವ ಆಳವಾದ ಭಕ್ತಿಯನ್ನು ಪ್ರದರ್ಶಿಸಿತು.

ನೀವು ಸ್ಪರ್ಧೆಗೆ ಒಬ್ಬರೇ ಬಂದಿದ್ದೀರಾ ಎಂದು ಕೇಳಿದಾಗ, ಶಿವಾನಿ ತನ್ನ ಬಲವಾದ ನಂಬಿಕೆಯನ್ನು ಸೂಚಿಸುವ ಭಗವಾನ್ ಶಿವನೊಂದಿಗೆ ಬಂದಿದ್ದೇನೆ ಎಂದು ಹೆಮ್ಮೆಯಿಂದ ಉತ್ತರಿಸಿದರು. ಅವರ ನಮ್ರತೆ ಮತ್ತು ಸೌಜನ್ಯವು ತೀರ್ಪುಗಾರರನ್ನು ಗೆದ್ದಿತು. ಶಿವನಿಗೆ ತನ್ನ ಭಕ್ತಿಯ ಹೊರತಾಗಿಯೂ, ಶಿವಾನಿ ಅಲ್ಲಾನ ಕುರಿತಾದ ಹಾಡನ್ನು ಹಾಡಲು ಆಯ್ಕೆ ಮಾಡಿಕೊಂಡರು. ಇದರಿಂದಾಗಿ ಆಕೆ ವ್ಯಾಪಕ ಪ್ರಶಂಸೆ ಪಡೆದಿದ್ದಾರೆ.

ಬೀದರ್‌ನ ಸಂಗೀತ ಕಲಾವಿದರ ಕುಟುಂಬದಿಂದ ಬಂದಿರುವ ಶಿವಾನಿ ಚಿಕ್ಕಂದಿನಿಂದಲೂ ಸಂಗೀತ ಲೋಕದಲ್ಲಿ ಮುಳುಗಿದ್ದಾರೆ. ಆಕೆಯ ಪೋಷಕರಿಂದಲೇ ಆರಂಭಿಕ ಹಂತದಲ್ಲಿ ಸಂಗೀತ ಅಭ್ಯಾಸ ಮಾಡಿದ್ದಾರೆ. ಶಿವಾನಿ ತನ್ನ ಮೂರನೇ ವಯಸ್ಸಿನಲ್ಲಿ ಸಂಗೀತ ಅಭ್ಯಾಸ ಆರಂಭಿಸಿದ್ದು, ಅಂದಿನಿಂದ ಸಂಗೀತ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ.

“ಇಂಡಿಯನ್ ಐಡಲ್” ರಿಯಾಲಿಟಿ ಶೋ ಆಯ್ಕೆಗೆ ಬಂದಿದ್ದ 13,000 ಸ್ಪರ್ಧಿಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಶಿವಾನಿ, ಸ್ಪರ್ಧೆಗೆ ಆಯ್ಕೆಯಾದ 25 ಮಂದಿಯಲ್ಲಿ ಶಿವಾನಿ ಕೂಡ ಸೇರಿದ್ದಾರೆ. ಜೀ ಟಿವಿಯ “ಸರಿಗಮಪ” ದಲ್ಲಿ ರನ್ನರ್ ಅಪ್ ಆಗಿ, “ಪ್ರೈಡ್ ಆಫ್ ತೆಲಂಗಾಣ” ನಲ್ಲಿ ಮೊದಲ ಬಹುಮಾನವನ್ನು ಮುಡಿಗೇರಿಸಿಕೊಂಡಿರುವುದು ಸೇರಿದಂತೆ ವಿವಿಧ ಸಂಗೀತ ಸ್ಪರ್ಧೆಗಳಲ್ಲಿ ಶಿವಾನಿ ಭಾಗವಹಿಸಿದ್ದು ಉದಯೋನ್ಮುಖ ತಾರೆಯಾಗಿ ಬೆಳೆಯುತ್ತಿದ್ದಾರೆ.

ಸಿಂಪಲ್ ಸುನಿ ನಿರ್ದೇಶನದ ಮತ್ತು ವಿನಯ್ ರಾಜ್‌ಕುಮಾರ್ ಅಭಿನಯದ “ಒಂದು ಸರಳ ಪ್ರೇಮಕಥೆ” ಚಿತ್ರದ ಹಾಡಿಗೆ ದನಿಯಾಗಿದ್ದು ಸಿನಿಮಾರಂಗದಲ್ಲೂ ಪ್ರವೇಶ ಪಡೆದಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read