ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಬಿಗ್ ಶಾಕ್: ದಿಢೀರ್ ಏರಿಕೆ ಕಂಡ ತೊಗರಿಬೇಳೆ ದರ ಕೆಜಿಗೆ 180 ರೂ.; ಹಬ್ಬದ ವೇಳೆಗೆ ಇನ್ನೂ ಹೆಚ್ಚಲಿದೆ ಬೆಲೆ

ಕಲಬುರಗಿ: ಕಲಬುರಗಿ ಜಿಲ್ಲೆಯಲ್ಲಿ ತೊಗರಿಗೆ ನೆಟಿ ರೋಗ ಸೇರಿದಂತೆ ಹಲವು ಕಾರಣದಿಂದ ಇಳುವರಿ ಕಡಿಮೆಯಾಗಿದೆ. ಇದರ ಪರಿಣಾಮ ತೊಗರಿ ಬೇಳೆ ದರ ದಿಢೀರ್ ಏರಿಕೆಯಾಗಿದೆ.

ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ನಿತ್ಯ ಬಳಕೆಯ ತೊಗರಿ ಬೇಳೆ ದರ ಏರಿಕೆಯಾಗಿರುವುದು ನುಂಗಲಾರದ ತುತ್ತಾಗಿದೆ. ಒಂದು ತಿಂಗಳ ಹಿಂದೆಯಷ್ಟೇ ಕೆಜಿಗೆ 130 ರೂ. ಇದ್ದ ತೊಗರಿ ಬೇಳೆ ದರ ಈಗ 175 ರಿಂದ 180 ರೂ. ವರೆಗೆ ಏರಿಕೆಯಾಗಿದೆ. 5 ಕೆಜಿ ಪ್ಯಾಕ್ ತೊಗರಿ ಬೇಳೆ 892 ರೂ.ಗೆ ದೊರೆಯುತ್ತಿದೆ.

ಮಾರುಕಟ್ಟೆಗೆ ತೊಗರಿ ಕಡಿಮೆ ಪ್ರಮಾಣದಲ್ಲಿ ಬರುತ್ತಿದ್ದು, ಪ್ರತಿ ಕ್ವಿಂಟಲ್ ಗೆ 12,000 ರೂ.ಗೆ ಏರಿಕೆಯಾಗಿದೆ. ಕಲಬುರಗಿ ಪ್ರದೇಶದಲ್ಲಿ 250 ಕ್ಕೂ ಹೆಚ್ಚು ದಾಲ್ ಮಿಲ್ ಗಳಿವೆ. ಮಾರುಕಟ್ಟೆಯಲ್ಲಿ ತೊಗರಿ ಖರೀದಿಸಿ ಸಂಸ್ಕರಣೆ ಮಾಡಿ ತೊಗರಿ ಬೇಳೆ ತಯಾರಿಸಿರುತ್ತಾರೆ. ಈ ತೊಗರಿ ಬೆಳೆಯನ್ನು ರಾಜ್ಯದಲ್ಲಿ ಮಾತ್ರವಲ್ಲದೇ, ಹೊರ ರಾಜ್ಯಗಳಿಗೂ ಕಳುಹಿಸಲಾಗುತ್ತದೆ.

ಒಂದು ತಿಂಗಳ ಹಿಂದೆಯಷ್ಟೇ ಕೆಜಿಗೆ 130 ರೂ. ಇದ್ದ ತೊಗರಿ ಬೇಳೆ ದರ ಈಗ 175 ರಿಂದ 180 ರೂ.ಗೆ ಏರಿಕೆಯಾಗಿದೆ. ಹಬ್ಬದ ವೇಳೆಗೆ ದರ ಮತ್ತಷ್ಟು ಏರಿಕೆಯಾಗಬಹುದು ಎನ್ನಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read