
ಹಣಕಾಸಿನ ಅಡಚಣೆಗಳು ಸಹಜ. ಆರ್ಥಿಕ ಮುಗ್ಗಟ್ಟಿನಿಂದಾಗಿ ಅನೇಕ ಕೆಲಸಗಳು ಅಪೂರ್ಣವಾಗುತ್ತವೆ. ಪ್ರಮುಖ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕೆಲ್ಲ ವಾಸ್ತುಶಾಸ್ತ್ರದಲ್ಲಿ ಸುಲಭದ ಪರಿಹಾರವಿದೆ. ಇವುಗಳನ್ನು ಅನುಸರಿಸಿದ್ರೆ ಹಣವನ್ನು ಆಕರ್ಷಿಸಬಹುದು.
ಮನೆಯಲ್ಲಿ ತೀವ್ರ ಆರ್ಥಿಕ ಮುಗ್ಗಟ್ಟು ಇದ್ದರೆ ಖೀರು ಅಥವಾ ಪಾಯಸವನ್ನು ತಯಾರಿಸಿ ಐವರು ಬಾಲಕಿಯರಿಗೆ 21 ಶುಕ್ರವಾರ ಅದನ್ನು ಉಣಬಡಿಸಬೇಕು. ಖೀರ್ ಮಾಡುವಾಗ ಸಕ್ಕರೆ ಮಿಠಾಯಿಯನ್ನು ಸೇರಿಸಬೇಕು. ಆದರೆ ಈ ಪರಿಹಾರದ ಕುರಿತಂತೆ ಯಾರೊಂದಿಗೂ ಅನಗತ್ಯವಾಗಿ ಚರ್ಚಿಸಬಾರದು.
ಆರ್ಥಿಕ ಸಮಸ್ಯೆಗಳು ಮತ್ತು ಸಾಲದಿಂದ ಮುಕ್ತಿ ಹೊಂದಲು ಶುಕ್ಲ ಪಕ್ಷದ ಮೊದಲ ಗುರುವಾರದಂದು ವಿವಾಹಿತ ಮಹಿಳೆಯರಿಗೆ ವಿವಾಹ ಸಾಮಗ್ರಿಗಳನ್ನು ದಾನ ಮಾಡಬೇಕು. ಕೈ ಬಳೆ, ಬಿಂದಿ ಪ್ಯಾಕೆಟ್, ಉಗುರಿನ ಬಣ್ಣ, ಸಿಂಧೂರ, ಕೆಂಪು ರಿಬ್ಬನ್ ಇತ್ಯಾದಿಗಳನ್ನು ಕೊಡಬೇಕು. ಹೀಗೆ ಮಾಡುವುದರಿಂದ ಸಾಲವು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಹಣಕಾಸಿನ ಅಡಚಣೆಯಿಂದ ಸ್ಥಗಿತಗೊಂಡ ಕೆಲಸಗಳೂ ಪೂರ್ಣಗೊಳ್ಳುತ್ತವೆ.
ನೀವು ಸಾಲವಾಗಿ ಕೊಟ್ಟ ಹಣ ವಾಪಸ್ ಬರದೇ ಇದ್ದಾಗ ಹಣದ ವಾಪಸಾತಿಗಾಗಿ ಪ್ರತಿದಿನ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ. ಈ ಕಾರ್ಯವನ್ನು ನಿಯಮಿತವಾಗಿ ಮಾಡಬೇಕು. ‘ಓಂ ಆದಿತ್ಯಾಯ ನಮಃ’ ಎಂದು ಪ್ರಾರ್ಥಿಸಬೇಕು. ಈ ರೀತಿ ಮಾಡುವುದರಿಂದ ಸಾಲ ಪಡೆದ ವ್ಯಕ್ತಿ ಹಣವನ್ನು ಶೀಘ್ರದಲ್ಲೇ ಹಿಂದಿರುಗಿಸುತ್ತಾನೆ.