HomeLatest Newsಶಬರಿಮಲೆ 'ಮಂಡಲ ಯಾತ್ರೆ' ಕೈಗೊಳ್ಳುವ ಭಕ್ತರಿಗೆ ಮುಖ್ಯ ಮಾಹಿತಿ: ದರ್ಶನಕ್ಕೆ ಆನ್ಲೈನ್ ಬುಕಿಂಗ್ ಆರಂಭ

ಶಬರಿಮಲೆ ‘ಮಂಡಲ ಯಾತ್ರೆ’ ಕೈಗೊಳ್ಳುವ ಭಕ್ತರಿಗೆ ಮುಖ್ಯ ಮಾಹಿತಿ: ದರ್ಶನಕ್ಕೆ ಆನ್ಲೈನ್ ಬುಕಿಂಗ್ ಆರಂಭ

ಶಬರಿಮಲೆ: ಶಬರಿಮಲೆ ಮಂಡಲ ಕಾಲದ ಯಾತ್ರೆ ಕೈಗೊಳ್ಳುವ ಭಕ್ತರಿಗೆ ನವೆಂಬರ್ 1ರಿಂದ ಆನ್ಲೈನ್ ಬುಕಿಂಗ್ ಆರಂಭಿಸಲಾಗಿದೆ.

ಒಂದು ದಿನದಲ್ಲಿ 70,000 ಭಕ್ತರಿಗೆ ಆನ್ಲೈನ್ ಬುಕಿಂಗ್ ಮತ್ತು 20,000 ಭಕ್ತರಿಗೆ ಸ್ಪಾಟ್ ಬುಕಿಂಗ್ ಮೂಲಕ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಅವಕಾಶ ನೀಡಲಾಗುವುದು. ಪಂಪಾದಲ್ಲಿ ಏಕಕಾಲದಲ್ಲಿ 10,000 ಜನರಿಗೆ ವಿಶ್ರಾಂತಿ ಸ್ಥಳಾವಕಾಶ ಕಲ್ಪಿಸಲು 10 ಜರ್ಮನ್ ಟೆಂಟ್ ಹಾಗೂ ಅರವಣ ಬಫರ್ ಸ್ಟಾಕ್ ಆಗಿ 50 ಲಕ್ಷ ಟಿನ್ ಗಳನ್ನು ಸಿದ್ಧಪಡಿಸಲು ಶಬರಿಮಲೆ ದೇವಾಲಯ ಸಮಿತಿ ಪರಿಶೀಲನಾ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ದೇವಸ್ವಂ ಸಚಿವ ವಿ.ಎನ್. ವಾಸವನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್. ಪ್ರಶಾಂತ್ ಹಾಗೂ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಪಟ್ಟಣಂತಿಟ್ಟ ಮತ್ತು ಇಡುಕ್ಕಿ ಜಿಲ್ಲಾಧಿಕಾರಿಗಳು ಭಾಗವಹಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಂಡಲ ಉತ್ಸವಕ್ಕಾಗಿ ನವೆಂಬರ್ 16ರಂದು ಸಂಜೆ 5 ಗಂಟೆಗೆ ಶಬರಿಮಲೆ ದೇವಾಲಯ ತೆರೆಯಲಾಗುವುದು. ಮಂಡಲ ಪೂಜೆ ಮುಗಿದ ನಂತರ ಡಿಸೆಂಬರ್ 27ರಂದು ರಾತ್ರಿ ದೇವಾಲಯ ಮುಚ್ಚಲಾಗುವುದು. ಮಕರ ಜ್ಯೋತಿ ಉತ್ಸವಕ್ಕೆ ಡಿಸೆಂಬರ್ 30ರಂದು ದೇವಾಲಯ ತೆರೆಯಲಾಗುವುದು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular