HomeKarnatakaBREAKING : ಸಂಚಾರಿ ಠಾಣೆ ಪೊಲೀಸರ ಕೈ ಸೇರಿದ ‘RTO’ ವರದಿ : ನಟ...

BREAKING : ಸಂಚಾರಿ ಠಾಣೆ ಪೊಲೀಸರ ಕೈ ಸೇರಿದ ‘RTO’ ವರದಿ : ನಟ ನಾಗಭೂಷಣ್ ಗೆ ಮತ್ತೆ ಸಂಕಷ್ಟ

ಬೆಂಗಳೂರು : ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟ ನಾಗಭೂಷಣ್ ಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಪೊಲೀಸರು ಮತ್ತೆ ವಿಚಾರಣೆಗೆ ಕರೆಸಲು ನಿರ್ಧಾರ ಮಾಡಿದ್ದಾರೆ.

ಹೌದು. ಅಪಘಾತಕ್ಕೊಳಗಾದ ನಟ ನಾಗಭೂಷಣ್ ಕಾರು ಪರಿಶೀಲನೆ ನಡೆಸಿದ ಆರ್ ಟಿ ಒ ಅಧಿಕಾರಿಗಳು ಅದರ ವರದಿಯನ್ನು ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸರಿಗೆ ನೀಡಿದ್ದಾರೆ.ಆರ್ ಟಿ ಒ ಅಧಿಕಾರಿಗಳು ಕಾರಿನ ಟಯರ್, ಸ್ಪೀಡೋ ಮೀಟರ್ ಪರಿಶೀಲನೆ ನಡೆಸಿದ್ದಾರೆ.

ಅಪಘಾತಕ್ಕೂ ಮುನ್ನ ಕಾರಿನ ಸ್ಪೀಡ್ 40—50 ಇತ್ತು, ಡಿಕ್ಕಿಯಾದ ಬಳಿಕ 70-80 ಕ್ಕೆ ಸ್ಪೀಡ್ ಹೆಚ್ಚಾಗಿದೆ. ಎಷ್ಟು ವೇಗದಲ್ಲಿ ಚಲಾಯಿಸಿದರೆ ಕಾರು ಇಷ್ಟೊಂದು ನಜ್ಜು ಗುಜ್ಜಾಗಬಹುದು ಎಂಬುದನ್ನು ಆರ್ ಟಿ ಒ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾಗಭೂಷಣ್ ಕಾರು ಇಂಜಿನ್ ಹಾಗೂ ನಜ್ಜುಗುಜ್ಜಾದ ಕಾರಿನ ಭಾಗವನ್ನು ಪರಿಶೀಲನೆ ನಡೆಸಿದ್ದಾರೆ. ಹಾಗೂ ಸಿಸಿಟಿವಿ ಆಧಾರದ ಮೇಲೆಯೂ ಪರಿಶೀಲನೆ ನಡೆಸಿ ಅದರ ವರದಿಯನ್ನು ಪೊಲೀಸರಿಗೆ ನೀಡಿದ್ದಾರೆ. ಆರ್ ಟಿ ಒ ಅಧಿಕಾರಿಗಳ ವರದಿ ಬಳಿಕ ಪೊಲೀಸರು ಕ್ರಮ ಕೈಗೊಂಡಿದ್ದು.ಮತ್ತೆ ನಟ ನಾಗಭೂಷಣ್ ನನ್ನು ವಿಚಾರಣೆಗೆ ಕರೆಸಲು ನಿರ್ಧರಿಸಿದ್ದಾರೆ.

ಸೆ.30ರಂದು ರಾತ್ರಿ ಕನಕಪುರ ರಸ್ತೆಯಲ್ಲಿ ನಟ ನಾಗಭೂಷಣ್ ಕಾರು ಫುಟ್ ಪಾತ್ ಮೇಲೆ ನಡೆದು ಹೋಗುತ್ತಿದ್ದ ದಂಪತಿಗೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿದ್ದರು. ನಟ ನಾಗಭೂಷಣ್ ಅವರ ಕಾರು ಅಪಘಾತದಲ್ಲಿ ಪ್ರೇಮಾ ಎಂಬ ಮಹಿಳೆ ಮೃತಪಟ್ಟಿದ್ದರು. ಅವರ ಪತಿ ಕೃಷ್ಣ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ನಾಗಭೂಷಣ್ ವಿರುದ್ಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular