HomeKarnatakaಜನಸಾಮಾನ್ಯರಿಗೆ ಬಿಗ್ ಶಾಕ್ : ಬೇಳೆಕಾಳುಗಳ ಬೆಲೆಯಲ್ಲಿ ಮತ್ತೆ ಭಾರೀ ಏರಿಕೆ!

ಜನಸಾಮಾನ್ಯರಿಗೆ ಬಿಗ್ ಶಾಕ್ : ಬೇಳೆಕಾಳುಗಳ ಬೆಲೆಯಲ್ಲಿ ಮತ್ತೆ ಭಾರೀ ಏರಿಕೆ!

ಬೆಂಗಳೂರು : ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಬಿಗ್ ಶಾಕ್, ಪೂರೈಕೆ ಕೊರತೆಯಿಂದಾಗಿ ರಾಜ್ಯದಲ್ಲಿ ಬೇಳೆಕಾಳುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ.

ರಾಜ್ಯದಲ್ಲಿ ತೊಗರಿ ಬೇಳೆ, ಹೆಸರು ಬೇಳೆ ಸೇರಿದಂತೆ ವಿವಿಧ ಬೇಳೆಕಾಳುಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಜನಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿ ಅನುಭವಿಸುವಂತಾಗಿದೆ. ಕಳೆದ ಜನವರಿಯಲ್ಲಿ ಕೆಜಿಗೆ 95 ರೂ.ಇದ್ದ ತೊಗರಿ ಬೇಳೆ ಇದೀಗ ಕೆಜಿಗೆ 181 ರೂ.ಗೆ ಬಂದು ತಲುಪಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದಲ್ಲಿ ಕಳೆದ ವರ್ಷ ಬೇಳೆ ಕಣಜದ ಜಿಲ್ಲೆಗಳಾದ ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ, ರಾಯಚೂರು ಜಿಲ್ಲೆಗಳಲ್ಲಿ ತೊಗರಿ ಬೇಳೆಗೆ ನೆಟೆರೋಗ, ಪ್ರವಾಹ, ಹವಾಮಾನ ವೈಪರೀತ್ಯದಿಂದ ವಾರ್ಷಿಕ 60 ಲಕ್ಷ ಕ್ವಿಂಟಾಲ್ ಸಂಗ್ರಹವಾಗುತ್ತಿದ್ದ ಬೇಳೆಕಾಳು ಈಗ 35 ಲಕ್ಷ ಕ್ವಿಂಟಾಲ್ ಗೆ ಕುಸಿದಿದೆ.

ಯಾವ ಬೇಳೆಕಾಳು ಎಷ್ಟು ಏರಿಕೆ?

ತೊಗರಿಬೇಳೆ ಕೆಜಿಗೆ 172 ರೂ.

ಕಡಲೇಬೇಳೆ 90 ರೂ.

ಹೆಸರುಬೇಳೆ 122 ರೂ.

ಕಡಲೆಕಾಳು 85 ರೂ.

ಹೆಸರು ಕಾಳು 155 ರೂ.ವರೆಗೆ ಏರಿಕೆಯಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular