ಕರಿಜ್ಮಾ ಎಕ್ಸ್ಎಂಆರ್‌ 13 ಸಾವಿರಕ್ಕೂ ಅಧಿಕ ಬುಕಿಂಗ್‌

Hero Karizma XMR Price - Mileage, Images, Colours | BikeWale

ತನ್ನ ಪ್ರೀಮಿಯಂ ಉತ್ಪನ್ನಗಳಿಗಾಗಿ ಅದ್ಭುತ ಪ್ರತಿಕ್ರಿಯೆಗಳನ್ನು ಪಡೆಯುತ್ತಿರುವ, ಮೋಟಾರ್‌ಸೈಕಲ್‌ ಮತ್ತು ಸ್ಕೂಟರ್‌ಗಳ ವಿಶ್ವದ ಅತಿದೊಡ್ಡ ತಯಾರಕ ಕಂಪನಿ ಹೀರೋ ಮೋಟೋಕಾರ್ಪ್, ಹೊಸದಾಗಿ ಬಿಡುಗಡೆಯಾದ ಮೋಟಾರ್‌ಸೈಕಲ್, ಕರಿಜ್ಮಾ ಎಕ್ಸ್ಎಂಆರ್‌ಗಾಗಿ 13,688 ಬುಕಿಂಗ್‌ಗಳನ್ನು ಸ್ವೀಕರಿಸಿದೆ.

ಹೀರೋ ಮೋಟೋಕಾರ್ಪ್ ಡೀಲರ್‌ಗಳಿಗೆ ಕರಿಜ್ಮಾ ಎಕ್ಸ್ಎಂಆರ್ ರವಾನೆಗಳು ಈಗಾಗಲೇ ಪ್ರಾರಂಭವಾಗಿದ್ದು, ಈ ತಿಂಗಳ ಹಬ್ಬದ ಅವಧಿಯಲ್ಲಿ ಗ್ರಾಹಕರಿಗೆ ವಿತರಣೆಗಳು ಪ್ರಾರಂಭವಾಗಲಿವೆ.

ಹೀರೋ ಕರಿಜ್ಮಾ ಎಕ್ಸ್ಎಂಆರ್ ಪರಿಚಯಾತ್ಮಕ ಬೆಲೆ 1,72,900 ರೂ.ಗಳು ಮತ್ತು ಗ್ರಾಹಕರ ಬುಕಿಂಗ್‌ ಆಗಸ್ಟ್ 29, 2023 ರಂದು ಪ್ರಾರಂಭವಾಗಿ ಸೆಪ್ಟೆಂಬರ್ 30, 2023 ಕ್ಕೆ ಮುಕ್ತಾಯವಾಗಿದೆ.

ಹೊಸ ಕರಿಜ್ಮಾ ಎಕ್ಸ್ಎಂಆರ್ ಈಗಿನ ಬೆಲೆ 1,79,900/- ರೂ. ಗಳು (ಎಕ್ಸ್ ಶೋ ರೂಂ ದೆಹಲಿ) ಮತ್ತು ಕಂಪನಿಯು ಶೀಘ್ರದಲ್ಲೇ ಹೊಸ ಬುಕಿಂಗ್ ವಿಂಡೋವನ್ನು ಪ್ರಾರಂಭಿಸಲಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read