ಈ ಬಾರಿ ಯಾರ ಪಾಲಾಗಲಿದೆ ವಿಶ್ವಕಪ್ ಕ್ರಿಕೆಟ್ ಟ್ರೋಫಿ ? 2011 ರಲ್ಲಿ ಭಾರತದ ಗೆಲುವಿನ ಭವಿಷ್ಯ ನುಡಿದಿದ್ದ ಜ್ಯೋತಿಷಿಯಿಂದ ಸಿಹಿಸುದ್ದಿ

ಬಹು ನಿರೀಕ್ಷಿತ ODI ವಿಶ್ವಕಪ್ ಆರಂಭವಾಗಿದ್ದು ಈ ಬಾರಿ ಕಪ್ ಯಾರ ಪಾಲಾಗಲಿದೆ ಎಂಬ ಲೆಕ್ಕಾಚಾರ ಶುರುವಾಗಿವೆ. ಈಗಾಗ್ಲೇ ಹಲವರು ಈ ಬಗ್ಗೆ ಊಹೆ, ಭವಿಷ್ಯ ನುಡಿಯುವುದು, ಬೆಟ್ಟಿಂಗ್ ಗೂ ಮುಂದಾಗಿದ್ದಾರೆ. ಈ ನಡುವೆ 2011 ರಲ್ಲಿ ಭಾರತ ವಿಶ್ವಕಪ್ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದ ಜ್ಯೋತಿಷಿ ಇದೀಗ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಮ್ಮೆ ಸಿಹಿ ಸುದ್ದಿ ನೀಡಿದ್ದಾರೆ.

ತಮ್ಮ ಇತ್ತೀಚಿನ ಹೇಳಿಕೆಯಲ್ಲಿ ಜ್ಯೋತಿಷಿ, ಅನಿರುದ್ಧ್ ಕುಮಾರ್ ಮಿಶ್ರಾ ಟ್ವಿಟರ್ ನಲ್ಲಿ ದಿಟ್ಟ ಹೇಳಿಕೆಯೊಂದನ್ನು ನೀಡಿದ್ದಾರೆ. “ನನ್ನ ಲೆಕ್ಕಾಚಾರದ ಪ್ರಕಾರ, ಭಾರತವು ಈ ಬಾರಿ ವಿಶ್ವಕಪ್ ಗೆಲ್ಲಲಿದೆ.” ಎಂದಿದ್ದಾರೆ. ಹಾಗಾದರೇ ಈ ಭವಿಷ್ಯ ನಿಜವಾಗಲಿದೆಯೇ ಎಂಬ ಕುತೂಹಲ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಲ್ಲಿದೆ.

ಅಲ್ಲದೆ ಅನಿರುದ್ಧ್ ಅವರು ಭಾರತದ 2011 ರ ವಿಶ್ವಕಪ್ ವಿಜಯದ ಬಗ್ಗೆ ಅವರ ಹಿಂದಿನ ಭವಿಷ್ಯವು ಸುಳ್ಳಾಗಲಿಲ್ಲ ಎಂದು ವಿವರಿಸಿದ್ದಾರೆ. “ಟ್ವಿಟ್ಟರ್‌ಗೆ ಬರುವ ಮೊದಲು ನಾನು 2011 ರಲ್ಲಿ ಕ್ರಿಕೆಟ್ ವಿಶ್ವಕಪ್‌ನ ಫೈನಲ್‌ಗೆ ಸುಮಾರು 1.5 ತಿಂಗಳ ಮೊದಲು ಭಾರತವು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದೆ. ಈಗ ಮತ್ತೊಮ್ಮೆ ವಿಶ್ವಕಪ್‌ನ ವಿಜೇತರನ್ನು ಊಹಿಸುವಂತೆ ಅನೇಕ ಮನವಿ/ ವಿನಂತಿಗಳು ಬರುತ್ತಿವೆ. ಈ ವಿಶ್ವಕಪ್‌ಗಾಗಿ ನಾನು ಯಾವುದೇ ಮುನ್ಸೂಚನೆಗಳನ್ನು ನೀಡುವುದಿಲ್ಲ ಎಂದು ನಾನು ಸ್ಪಷ್ಟಪಡಿಸಿದ್ದರೂ, ಭಾರೀ ಬೇಡಿಕೆಯ ಕಾರಣ ನಾನು ವಿನಾಯಿತಿ ನೀಡಲು ಮತ್ತು ವಿಶ್ವಕಪ್‌ನ ವಿಜೇತರನ್ನು ಊಹಿಸಲು ನಿರ್ಧರಿಸಿದೆ” ಎಂದಿದ್ದಾರೆ.

ಸ್ವಾಭಾವಿಕವಾಗಿ ಈ ಪೋಸ್ಟ್ ವೈರಲ್ ಆಗಿದ್ದು ಓರ್ವ ಅಭಿಮಾನಿ ಆತ್ಮವಿಶ್ವಾಸದಿಂದ, “ಎಲ್ಲರೂ ಇದನ್ನು ಬುಕ್‌ಮಾರ್ಕ್ ಮಾಡಿ, ನಾವು ವಿಶ್ವಕಪ್ ನಂತರ ಈ ಪೋಸ್ಟ್ ಅನ್ನು ನೋಡುತ್ತೇವೆ” ಎಂದು ಹೇಳಿದ್ದಾರೆ. ಸದ್ಯ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಶುರುವಾಗಿದ್ದು 45 ದಿನಗಳ ಕಾಲ ನಡೆಯುವ ಈ ಕ್ರಿಕೆಟ್ ಸಮರದಲ್ಲಿ ಕಪ್ ಯಾರು ಎತ್ತಿ ಹಿಡಿಯುತ್ತಾರೆಂಬ ಕುತೂಹಲ ಹೆಚ್ಚಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read