HomeAutoBIG NEWS: ಕಾರ್ ಪೂಲಿಂಗ್ ಗೆ ಅವಕಾಶ ಇಲ್ಲವೇ ಅನುಮತಿ ನಿರಾಕರಣೆ ಬಗ್ಗೆ 10 ದಿನದಲ್ಲಿ...

BIG NEWS: ಕಾರ್ ಪೂಲಿಂಗ್ ಗೆ ಅವಕಾಶ ಇಲ್ಲವೇ ಅನುಮತಿ ನಿರಾಕರಣೆ ಬಗ್ಗೆ 10 ದಿನದಲ್ಲಿ ನಿರ್ಧಾರ

ಬೆಂಗಳೂರು: ಕಾರ್ ಪೂಲಿಂಗ್ ಬಗ್ಗೆ 10 ದಿನಗಳಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಆ್ಯಪ್ ಆಧಾರಿತ ಕಾರ್ ಪೂಲಿಂಗ್ ಸೇವೆ ನೀಡುತ್ತಿರುವ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಚಿವರು, ಬೆಂಗಳೂರು ನಗರದಲ್ಲಿ ಕಾರ್ ಪೂಲಿಂಗ್ ಗೆ ಅವಕಾಶ ನೀಡುವ ಬಗ್ಗೆ ಅಥವಾ ಅನುಮತಿ ಹಿಂಪಡೆಯುವ ಕುರಿತಾಗಿ ಮುಂದಿನ 10 ದಿನಗಳ ಒಳಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದುವರೆಗೆ ಕಾರ್ ಪೂಲಿಂಗ್ ಸೇವೆಗೆ ನಿಷೇಧ ಹೇರಿಲ್ಲ. ಆದರೆ, ವೈಟ್ ಬೋರ್ಡ್ ಹೊಂದಿದ ವಾಣಿಜ್ಯೇತರ ವಾಹನಗಳು ಕಾರ್ ಪೂಲಿಂಗ್ ಗೆ ಬಳಕೆ ಮಾಡುವುದಕ್ಕೆ ನಿಯಂತ್ರಣ ಹೇರಬೇಕಿದೆ. ಮುಂದಿನ 10 ದಿನಗಳೊಳಗೆ ನಗರದಲ್ಲಿ ಕಾರ್ ಪೂಲಿಂಗ್ ಗೆ ಅವಕಾಶ ನೀಡುವುದು ಅಥವಾ ಅನುಮತಿ ಹಿಂಪಡೆಯುವ ಕುರಿತಾಗಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular