ಹೌಂಗ್ಝೌ : ಏಷ್ಯನ್ಸ್ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಮಹಿಳಳಾ ಸ್ಪೀಡ್ ಸ್ಕೇಟಿಂಗ್ ರಿಲೇ ತಂಡ ಭರ್ಜರಿ ಪ್ರದರ್ಶನದ ಮೂಲಕ ಕಂಚಿನ ಪದಕ ಗೆದ್ದಿದೆ.
ಸಂಜನಾ ಬತುಲಾ, ಕಾರ್ತಿಕಾ ಜಗದೀಶ್ವರನ್, ಹೀರಾಲ್ ಸಾಧು ಮತ್ತು ಆರತಿ ಕಸ್ತೂರಿ ರಾಜ್ ಅವರನ್ನೊಳಗೊಂಡ ಭಾರತೀಯ ಮಹಿಳಾ ರೋಲರ್ ಸ್ಕೇಟಿಂಗ್ ತಂಡವು ಏಷ್ಯನ್ ಗೇಮ್ಸ್ ನ 3000 ಮೀಟರ್ ಸ್ಪೀಡ್ ಸ್ಕೇಟಿಂಗ್ ರಿಲೇಯಲ್ಲಿ ಕಂಚಿನ ಪದಕ ಗೆದ್ದಿದೆ.
ಭಾರತದ ನಾಲ್ವರು 4 ನಿಮಿಷ 34.861 ಸೆಕೆಂಡುಗಳಲ್ಲಿ ಓಟವನ್ನು ಪೂರ್ಣಗೊಳಿಸಿ ಮೂರನೇ ಸ್ಥಾನ ಪಡೆದರು. ಚೈನೀಸ್ ತೈಪೆ 4 ನಿಮಿಷ 19.447 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರೆ, ದಕ್ಷಿಣ ಕೊರಿಯಾ 4 ನಿಮಿಷ 21.146 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ತನ್ನದಾಗಿಸಿಕೊಂಡಿತು.
ವಿಶೇಷವೆಂದರೆ, ಈ ಸಾಧನೆಯು ಏಷ್ಯನ್ ಕ್ರೀಡಾಕೂಟದಲ್ಲಿ ರೋಲರ್ ಸ್ಕೇಟಿಂಗ್ನಲ್ಲಿ ಭಾರತಕ್ಕೆ ಮೂರನೇ ಪದಕವನ್ನು ತಂದುಕೊಟ್ಟಿತು. ಈ ಹಿಂದೆ 2010ರಲ್ಲಿ ಗುವಾಂಗ್ಝೌನಲ್ಲಿ ನಡೆದ ಪುರುಷರ ಫ್ರೀ ಸ್ಕೇಟಿಂಗ್ ಮತ್ತು ಜೋಡಿ ಸ್ಕೇಟಿಂಗ್ ಸ್ಪರ್ಧೆಗಳಲ್ಲಿ ಭಾರತದ ರೋಲರ್ ಸ್ಕೇಟರ್ಗಳು ಎರಡು ಕಂಚಿನ ಪದಕಗಳನ್ನು ಗೆದ್ದಿದ್ದರು.
🥉Roller Skating Glory!🌟 #AsianGames2022
Our women's speed skating relay team has made their way to the 3000m Relay Final podium, claiming the BRONZE MEDAL!🥉
With a stellar time of 4:34.861, they showcased their incredible speed and teamwork on the rink! 🚀🙌
Congratulations… pic.twitter.com/shgahTuSXj
— SAI Media (@Media_SAI) October 2, 2023

