ಬಾಲಿವುಡ್ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಗಣೇಶ ಚತುರ್ಥಿ ಸಂಭ್ರಮಾಚರಣೆಗಳ ನಡುವೆಯೇ ಮುಂಬೈನ ಐಕಾನಿಕ್ ಲಾಲ್ಬಾಗ್ಚಾ ರಾಜಾ ದರ್ಶನಕ್ಕಾಗಿ ಭೇಟಿ ನೀಡಿದ್ದಾರೆ.
ಸಾಮಾನ್ಯವಾಗಿ ಇಲ್ಲಿ ಸೆಲೆಬ್ರಿಟಿಗಳು ವಿವಿಐಪಿ ಲೇನ್ನಲ್ಲಿ ಭೇಟಿ ನೀಡುತ್ತಾರೆ. ಆದರೆ ಮಾನುಷಿ ಚಿಲ್ಲರ್ ಮಾತ್ರ ಸಾಮಾನ್ಯರಲ್ಲಿ ಸಾಮಾನ್ಯರಂತೆ ಸಾಲಿನಲ್ಲಿ ಕಾದು ಜನಸಂದಣಿಯ ನಡುವೆಯೇ ದೇವರ ದರ್ಶನ ಪಡೆದಿದ್ದಾರೆ.
ಲಾಲ್ ಬಾಗ್ಚಾ ರಾಜಾದಲ್ಲಿ ಸಾಮಾನ್ಯರು ದೇವರ ದರ್ಶನಕ್ಕೆ ಸಿಕ್ಕಾಪಟ್ಟೆ ಕಷ್ಟ ಪಡುತ್ತಿರುವ ನಡುವೆಯೇ ಸೆಲೆಬ್ರಿಟಿಗಳು ಆರಾಮಾಗಿ ವಿವಿಐಪಿ ಲೈನ್ನಲ್ಲಿ ತೆರಳಿ ದೇವರ ದರ್ಶನ ಪಡೆಯುತ್ತಿದ್ದರು.
ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮಾನುಷಿ ಚಿಲ್ಲರ್ ಸಾಮಾನ್ಯರಲ್ಲಿ ಸಾಮನ್ಯರಂತೆ ದೇವರ ದರ್ಶನ ಪಡೆದಿರೋದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.
ಈ ವಿಡಿಯೋವನ್ನ ಸ್ವತಃ ಮಾನುಷಿ ಚಿಲ್ಲರ್ ಕೂಡ ಶೇರ್ ಮಾಡಿದ್ದು ಗಣಪತಿ ಬಪ್ಪಾ ಮೋರಿಯಾ ಎಂದು ಶೀರ್ಷಿಕೆ ನೀಡಿದ್ದಾರೆ. ಪುಟ್ಲಬಾಯಿ ಚಾಲ್ನಲ್ಲಿರುವ ಲಾಲ್ ಬಾಗ್ಚಾ ರಾಜ ಸಾರ್ವಜನಿಕ ಗಣೇಶೋತ್ಸವ ಮಂಡಲ ಸಾಕಷ್ಟು ಫೇಮಸ್ ಆಗಿದೆ. 1934ರಿಂದ ಇಲ್ಲಿ ಗಣೇಶನ ಪ್ರತಿಷ್ಟಾಪನೆ ಮಾಡಲಾಗ್ತಿದೆ.