HomeKarnatakaಪೋಷಕರೇ ಗಮನಿಸಿ : 8 ನೇ ತರಗತಿ ವಿದ್ಯಾರ್ಥಿಗಳ `NMMS’ ಪರೀಕ್ಷಾ ನೋಂದಣಿ ದಿನಾಂಕ ವಿಸ್ತರಣೆ

ಪೋಷಕರೇ ಗಮನಿಸಿ : 8 ನೇ ತರಗತಿ ವಿದ್ಯಾರ್ಥಿಗಳ `NMMS’ ಪರೀಕ್ಷಾ ನೋಂದಣಿ ದಿನಾಂಕ ವಿಸ್ತರಣೆ

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ (ಡಿ.ಎಸ್.ಇ.ಆರ್.ಟಿ) ವತಿಯಿಂದ ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಪ್ರೌಢಶಾಲಾ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಡಿಸೆಂಬರ್ 17 ರಂದು ಎನ್‍ಎಮ್‍ಎಮ್‍ಎಸ್ ಪರೀಕ್ಷೆ ನಡೆಸಲಾಗುವುದು.

ಈ ಪರೀಕ್ಷೆಯನ್ನು ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಸಲಾಗುವುದು. ಪರೀಕ್ಷಾ ನೋಂದಣಿಗೆ ನಿಗದಿ ಪಡಿಸಿದ್ದ ಸೆ.30 ರ ದಿನಾಂಕವನ್ನು ಅ.4 ರ ವರೆಗೆ ವಿಸ್ತರಿಸಲಾಗಿದೆ. ಈ ಪರೀಕ್ಷೆಗೆ ತಮ್ಮ ಶಾಲಾ ಮಕ್ಕಳನ್ನು ಆನ್‍ಲೈನ್ ಮೂಲಕ ಅಕ್ಟೋಬರ್ 4 ರೊಳಗಾಗಿ ನೋಂದಾಯಿಸಲು ಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಕ್ರಮ ವಹಿಸಬೇಕು ಎಂದು ಕೂಡಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ( ಡಯಟ್ ) ಯ ಪ್ರಾಂಶುಪಾಲರೂ ಆದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ( ಅಭಿವೃದ್ಧಿ) ಎಂ.ಚಂದ್ರಕಾಂತ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಪರೀಕ್ಷೆ ನೋಂದಣಿಗೆ ಈಗಾಗಲೇ ಶಿಕ್ಷಣ ಇಲಾಖೆಯು ನೀಡಿರುವ ಲಿಂಕ್ ಬಳಸಿ ಹೆಚ್ಚಿನ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ನೋಂದಾಯಿಸಬೇಕು ಎಂದು ತಿಳಿಸಿದ್ದಾರೆ.

ಎನ್‍ಎಮ್‍ಎಮ್‍ಎಸ್. ಪರೀಕ್ಷೆ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ನೋಡಲ್ ಅಧಿಕಾರಿಯಾದ ಡಯಟ್ ಸಂಸ್ಥೆಯ ಉಪನ್ಯಾಸಕಿ ಕೆ.ಎಸ್.ನಳಿನಾಕ್ಷಿ, (ಮೊ: 81399 56802), ತಾಲ್ಲೂಕು ನೋಡಲ್ ಅಧಿಕಾರಿಗಳಾದ ಕೆ.ಬಿ.ರಾಧಾಕೃಷ್ಣ, ಸೋಮವಾರಪೇಟೆ ತಾಲ್ಲೂಕು (ಮೊ: 98800 99601),ಎಂ.ಎಚ್.ಹರೀಶ್, ಮಡಿಕೇರಿ ತಾಲ್ಲೂಕು (ಮೊ: 99806 69032) ಮಾರ್ಗರೇಟ್, ವಿರಾಜಪೇಟೆ ತಾಲ್ಲೂಕು (ಮೊ: 9448706804) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular