ಬೆಂಗಳೂರು : ಕಾವೇರಿ ನೀರು ತಮಿಳುನಾಡಿಗೆ ಬಿಡುತ್ತಿರುವುದನ್ನು ವಿರೋಧಿಸಿ ಸೆಪ್ಟೆಂಬರ್ 26 ರ ನಾಳೆ ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದ್ದು, 50 ಕ್ಕೂ ಹೆಚ್ಚು ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿವೆ.
ನಾಳೆಯ ಬೆಂಗಳೂರು ಬಂದ್ ಗೆ ರಾಜ್ಯ ಚಾಲಕರ ಒಕ್ಕೂಟದ ಅಧ್ಯಕ್ಷ ನಾರಾಯಣಸ್ವಾಮಿ ಬೆಂಬಲ ಸೂಚಿಸಿದ್ದು, ಶಾಲಾ ವಾಹನಗಳನ್ನು ಬಿಟ್ಟು ಎಲ್ಲಾ ವಾಹನಗಳನ್ನು ಬಂದ್ ಮಾಡಲಾಗುವುದು. ಆಟೋ ರಿಕ್ಷಾ,ಓಲಾ, ಉಬರ್, ಮಿನಿ ಬಸ್ ಸೇರಿದಂತೆ ಎಲ್ಲಾ ವಾಹನಗಳ ಸಂಚಾರ ಬಂದ್ ಆಗಲಿದೆ ಎಂದು ತಿಳಿಸಿದ್ದಾರೆ.
ರೈತ ಮುಖಂಡ ಕುರಬೂರು ಶಾಂತಕುಮಾರ್ ಅವರು ಬೆಂಗಳೂರು ಬಂದ್ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. ನೂರಾರು ಸಂಘ ಸಂಸ್ಥೆಗಳು ಬಂದ್ಗೆ ಬೆಂಬಲ ಕೊಟ್ಟಿದೆ. ಸಂಪೂರ್ಣ ಬಂದ್ ಮಂಗಳವಾರ ನಡೆಯಲಿದೆ. ಟೌನ್ ಹಾಲ್ ಮೂಲಕ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗ ರ್ಯಾಲಿ ನಡೆಯಲಿದೆ ಎಂದು ಹೇಳಿದ್ದಾರೆ.