HomeIndiaಲೈಂಗಿಕತೆ ಇಲ್ಲದ ವೈವಾಹಿಕ ಬಂಧನ ಪರಿಪೂರ್ಣವಲ್ಲ, ಉದ್ದೇಶಪೂರ್ವಕ ಲೈಂಗಿಕ ಬಯಕೆ ನಿರಾಕರಣೆ ಹಿಂಸೆಗೆ ಸಮಾನ: ಹೈಕೋರ್ಟ್

ಲೈಂಗಿಕತೆ ಇಲ್ಲದ ವೈವಾಹಿಕ ಬಂಧನ ಪರಿಪೂರ್ಣವಲ್ಲ, ಉದ್ದೇಶಪೂರ್ವಕ ಲೈಂಗಿಕ ಬಯಕೆ ನಿರಾಕರಣೆ ಹಿಂಸೆಗೆ ಸಮಾನ: ಹೈಕೋರ್ಟ್

ನವದೆಹಲಿ: ದಂಪತಿಯಲ್ಲಿ ಯಾರೇ ಆದರೂ ಉದ್ದೇಶಪೂರ್ವಕವಾಗಿ ಲೈಂಗಿಕ ಬಯಕೆ ನಿರಾಕರಿಸಿದಲ್ಲಿ ಅದು ಹಿಂಸೆಗೆ ಸಮಾನ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಲೈಂಗಿಕತೆ ಇಲ್ಲದ ವೈವಾಹಿಕ ಬಂಧನ ಪರಿಪೂರ್ಣವಲ್ಲ. ವೈವಾಹಿಕ ಜೀವನಕ್ಕೆ ಲೈಂಗಿಕ ಬಾಂಧವ್ಯದಲ್ಲಿನ ಅತೃಪ್ತಿಯಷ್ಟು ಅಪಾಯಕಾರಿ ಬೇರೆ ಯಾವುದೂ ಇಲ್ಲ ಎಂದು ಹೈಕೋರ್ಟ್ ಹೇಳಿದೆ. ಡೈವೋರ್ಸ್ ಮಂಜೂರು ಮಾಡಿದ್ದ ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮಹಿಳೆ ಒಬ್ಬರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ನೇತೃತ್ವದ ಪೀಠ ವಿಚ್ಛೇದನ ನೀಡಿರುವುದನ್ನು ಎತ್ತಿ ಹಿಡಿದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2004 ರಲ್ಲಿ ಹಿಂದೂ ಸಂಪ್ರದಾಯದಂತೆ ದಂಪತಿಯ ಮದುವೆ ನಡೆದಿದ್ದು, ಮದುವೆಯಾದ 35 ದಿನಗಳಲ್ಲಿ ಪತ್ನಿ ತವರಿಗೆ ವಾಪಸ್ ತೆರಳಿದ್ದು, ಗಂಡನ ಮನೆಗೆ ವಾಪಸ್ ಬಂದಿರಲಿಲ್ಲ ಎನ್ನುವ ಅಂಶವನ್ನು ನ್ಯಾಯಾಲಯ ಪರಿಗಣಿಸಿದೆ. ಈ ಪ್ರಕರಣದಲ್ಲಿ ಇದನ್ನು ಒಂದು ಪರಿಪೂರ್ಣ ಮದುವೆ ಎಂದು ಪರಿಗಣಿಸಲು ಆಗುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಪತಿ ವಿರುದ್ಧ ಆಧಾರ ರಹಿತವಾಗಿ ವರದಕ್ಷಿಣೆ ದೂರು ಸಲ್ಲಿಸಿರುವುದು ಕೂಡ ಕ್ರೌರ್ಯ ಎಂದು ನ್ಯಾಯಾಲಯ ಹೇಳಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular