HomeIndiaಮಲ್ಟಿಪ್ಲೆಕ್ಸ್​ ನಲ್ಲಿ ಹೊರಗಿನ ಸ್ನಾಕ್ಸ್ ಕೊಂಡೊಯ್ಯಲು ಯುವಕನ ಬೊಂಬಾಟ್‌ ಪ್ಲಾನ್; ವಿಡಿಯೋ ವೈರಲ್

ಮಲ್ಟಿಪ್ಲೆಕ್ಸ್​ ನಲ್ಲಿ ಹೊರಗಿನ ಸ್ನಾಕ್ಸ್ ಕೊಂಡೊಯ್ಯಲು ಯುವಕನ ಬೊಂಬಾಟ್‌ ಪ್ಲಾನ್; ವಿಡಿಯೋ ವೈರಲ್

ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸುವಾಗ ಸ್ನಾಕ್ಸ್​​ ಜೊತೆಯಿದ್ದರೆ ತುಂಬಾನೇ ಖುಷಿ. ಇಲ್ಲವಾದರೆ ಸಿನಿಮಾ ನೋಡಿದಂಗೆ ಎನಿಸೋದಿಲ್ಲ. ಆದರೆ ಮಲ್ಟಿಪ್ಲೆಕ್ಸ್​​ಗಳಲ್ಲಿ ಸಿನಿಮಾ ಟಿಕೆಟ್​ಗಿಂತ ಅಲ್ಲಿ ಸಿಗುವ ಸ್ನಾಕ್ಸ್​ ಬೆಲೆಯೇ ದುಪ್ಪಟ್ಟಿರುತ್ತದೆ.

ಮೇಲಾಗಿ ಅಲ್ಲಿ ಹೊರಗಡೆಯಿಂದ ತಿಂಡಿ ತೆಗೆದುಕೊಂಡು ಹೋಗೋಕೂ ಅವಕಾಶ ಇರೋದಿಲ್ಲ. ಆದರೆ ಇಲ್ಲೊಬ್ಬ ಯುವಕ ಅತ್ಯಂತ ವಿಭಿನ್ನ ರೀತಿಯಲ್ಲಿ ಹೊರಗಿನ ತಿಂಡಿಗಳನ್ನು ಮಲ್ಟಿಪ್ಲೆಕ್ಸ್​ನ ಒಳಗೆ ಕೊಂಡೊಯ್ದಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಲ್​ನ ಫುಡ್​ಕೋರ್ಟ್​ನಲ್ಲಿ ತಿಂಡಿಗಳನ್ನು ಆರ್ಡರ್​ ಮಾಡಿದ ಯುವಕ ಅದನ್ನು ಬಾಕ್ಸ್​ ಒಂದರಲ್ಲಿ ತುಂಬಿದ್ದಾನೆ. ಆ ಬಾಕ್ಸ್​ನ್ನು ಬ್ಯಾಗಿನೊಳಗೆ ಹಾಕಿಕೊಂಡು ಸೀದಾ ಥಿಯೇಟರ್​ನ ಕಡೆಗೆ ತೆರಳಿದ್ದಾನೆ. ಇದಾದ ಬಳಿಕ ಚೆಕ್ಕಿಂಗ್​ ಸಿಬ್ಬಂದಿ ಕೇವಲ ಬ್ಯಾಗ್​ ಪರಿಶೀಲನೆ ಮಾಡಿದರೇ ಹೊರತು ಬಾಕ್ಸ್​ನ ಒಳಗೆ ಏನಿತ್ತು ಅನ್ನೋದನ್ನ ನೋಡಿಲ್ಲ.

ಸೀದಾ ಆ ಯುವಕ ಮಲ್ಟಿಪ್ಲೆಕ್ಸ್​ನ ಒಳಗೆ ಹೋಗಿ ಆ ಸ್ನಾಕ್ಸ್​​ ಎಂಜಾಯ್​ ಮಾಡಿದ್ದಾನೆ. ಇದನ್ನು ನೋಡಿದ ನೆಟ್ಟಿಗರು , ಅನೇಕರು ನಾವು ಈ ಐಡಿಯಾ ಯೂಸ್ ಮಾಡುತ್ತೇವೆ ಎಂದು ಹೇಳಿದರೆ ಇನ್ನೂ ಕೆಲವರು ಈ ರೀತಿಯ ವಿಡಿಯೋಗಳನ್ನು ಮಾಡಿ ಹಾಕೋದ್ರಿಂದ ಮುಂದಿನ ಬಾರಿ ಸೆಕ್ಯೂರಿಟಿ ಸಿಬ್ಬಂದಿ ಇನ್ನಷ್ಟು ಅಲರ್ಟ್ ಆಗಿರ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular